ಸರ್ವಧರ್ಮಗಳಿಂದ ಸಮನ್ವಯತೆ, ಶಾಂತಿ ಬೋಧನೆಗೆ ಒತ್ತು

24M.D.R.4
ಮದ್ದೂರು ಪಟ್ಟಣದ ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬದ ಆಚರಣೆ ಮಾಡಲಾಯಿತು. ಶಿವನಂಜಯ್ಯ, ಎಂ.ಎಸ್.ಸಂತೋಷ್‌ಗೌಡ, ಎ.ವಿ.ಪಾವನಾ ಇದ್ದರು.
Published on

ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆಯ ಸಿಇಒ ಎಂ.ಎಸ್.ಸಂತೋಷ್‌ಗೌಡ ಅಭಿಮತ

ಮದ್ದೂರು: ಸರ್ವಧರ್ಮಗಳು, ಸಮನ್ವಯತೆ ಮತ್ತು ಶಾಂತಿ ಭೋಧನೆಗೆ ಒತ್ತು ನೀಡಿರುವುದೇ ದೇಶದ ಏಕತೆಯ ಮೂಲ ಮಂತ್ರ ಎಂದು ಗ್ಲೋಬಲ್ ಇಂಟರ್‌ನ್ಯಾಷನಲ್ ಶಾಲೆಯ ಸಿಇಒ ಎಂ.ಎಸ್.ಸಂತೋಷ್‌ಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಸರ್ವಶಿವ ಎಜುಕೇಷನಲ್ ಟ್ರಸ್ಟ್‌ನ ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮಂಗಳವಾರ ಕ್ರಿಸ್‌ಮಸ್ ಹಬ್ಬದ ಆಚರಣೆ ಸಂಬಂಧ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಉಪನ್ಯಾಸ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು.

ದೇಶದಲ್ಲಿ ಎಲ್ಲ ವರ್ಗದ ಜನರು ತಮ್ಮ ಪಾರಂಪರಿಕ ಜೀವನ ಶೈಲಿಯ ಜತೆಗೆ ಅವರದೇ ಧರ್ಮಗಳ ಹಬ್ಬ ಹರಿದಿನಗಳನ್ನು ವಿಜೃಂಭಣೆಯಿಂದ ಹಿಂದಿನಿಂದಲೂ ಆಚರಿಸುತ್ತಾ ಬಂದಿದೆ. ಾಂತಿ, ಸೌಹಾರ್ಧತೆ ಭಾರತದ ಮೂಲ ಮಂತ್ರವಾಗಿದ್ದು ದೇಶ-ವಿದೇಶಗಳು ಸಹ ನಮ್ಮಲ್ಲಿನ ಆಚಾರ -ವಿಚಾರಗಳು ಸೇರಿದಂತೆ ಧರ್ಮಗ್ರಂಥಗಳು ಹಬ್ಬ ಮತ್ತಿತರ ಆಚರಣೆಗಳು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಒಪ್ಪುವಂತಹ ಮತ್ತು ಇವುಗಳನ್ನು ಅನುಸರಿಸುವ ಮಟ್ಟಕ್ಕೆ ತಲುಪಿರುವುದು ನಮ್ಮ ದೇಶದ ನೆಲದ ಸೊಗಡಿಗೆ ಉದಾಹರಣೆ ಎಂದರು.

ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ರೂಪಕಗಳು, ನಾಟಕ ಪ್ರದರ್ಶನ ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಸಂಸ್ಥೆಯ ಅಧ್ಯಕ್ಷ ಶಿವನಂಜಯ್ಯ, ಮುಖ್ಯ ಶಿಕ್ಷಕಿ ಎ.ವಿ.ಪಾವನಾ, ಸಹ ಶಿಕ್ಷಕರಾದ ಮೀನಾ, ಜ್ಯೋತಿ, ಸುನಂದಾ, ಕುಮಾರ್, ಕಾಂಚನಾ, ಸಾನಿಯಾ, ಮಾಹಿನ್, ಸುಷ್ಮಾ, ಪ್ರಿಯಾಂಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net