ಎಸ್​ಸಿ&ಎಸ್​ಟಿ ಸಮಸ್ಯೆಗಳ ನಿವಾರಣೆಗೆ ಒತ್ತು

vemghal
Published on

ವೇಮಗಲ್​: ಹಂತ ಹಂತವಾಗಿ ಪರಿಶಿಷ್ಟ ಜಾತಿ, ಪಂಗಡದ ಸಮಸ್ಯೆಗಳನ್ನು ಶ್ರೀ ಬಗೆಹರಿಸುವುದಾಗಿ ವೇಮಗಲ್​ ಪೊಲೀಸ್​ ಠಾಣೆಯ ವೃತ್ತ ನಿರೀಕ ಬಿ.ಪಿ.ಮಂಜು ಭರವಸೆ ನೀಡಿದರು.

ಕೋಲಾರ ತಾಲೂಕು ವೇಮಗಲ್​ ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಹಲವು ಮುಖಂಡರುಗಳು ಪ್ರತಿ ಹಳ್ಳಿಗಳಿರುವ ದಲಿತರ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಪತ್ರದ ಮೂಲಕ ತಿಳಿಸಿ ಬಗೆಹರಿಸುವುದಾಗಿ ಭರವಸೆ ನೀಡಿದ ಅವರು, ದಲಿತರಿಗೆ ತೊಂದರೆಯಾದಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮುಖ್ಯವಾಗಿ ವೇಮಗಲ್​ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್​ ಪ್ರತಿಮೆ ಹಾಗೂ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲು ಸಂಬಂಧಪಟ್ಟಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹಾಗೂ ಸ್ಥಳ ನಿಗದಿ ಮಾಡಲು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗುವುದು. ಎಸ್​&ಎಸ್ಟಿ ಜನಾಂಗದ ಜನರ ಸಮಸ್ಯೆಗಳು ಏನೇ ಇದ್ದರೂ ನೇರವಾಗಿ ಬಂದು ತಿಳಿಸಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಹಿರಿಯ ಮುಖಂಡರಾದ ಹೊಲೇರಹಳ್ಳಿ ಆಂಜಿನಪ್ಪ, ದೊಡ್ಡವಲ್ಲಬ್ಬಿ ತಾರಕ್​ ಮಂಜು, ಚನ್ನಪ್ಪನಹಳ್ಳಿ ನಾಗರಾಜ್​, ಕಲ್ಕೆರೆ ವಿಜಯಕುಮಾರ್​, ಬೈರಂಡಳ್ಳಿ ನಾಗೇಶ್​, ಕ್ಯಾಲನೂರು ಕ್ರಾಸ್​ ಸತೀಶ್​ ಇತರರಿದ್ದರು.

ಪುಂಡರಿಗೆ ಬುದ್ದಿ ಕಲಿಸಿ

ವೇಮಗಲ್​ ಪಟ್ಟಣದಲ್ಲಿ ಹದಗೆಟ್ಟಿರುವ ಸಿಸಿ ಕ್ಯಾಮರಾಗಳನ್ನು ಕೂಡಲೇ ಸರಿಪಡಿಸಬೇಕು.

ನರಸಾಪುರ ಸೇರಿ ವೇಮಗಲ್​ನಲ್ಲಿ ವಾಹನಗಳನ್ನು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು. ರಾತ್ರಿ ಕೆಲವು ಯುವಕರು ಕೈಗಾರಿಕಾ ಪ್ರದೇಶದಲ್ಲಿ ಮತ್ತು ಕೆಲವು ಲೇಔಟ್​ಗಳಲ್ಲಿ ಮದ್ಯಪಾನ ಮಾಡುವುದು ಹಾಗೂ ಬಾಟಲಿಗಳನ್ನು ಅಲ್ಲಿಯೇ ಹೊಡೆದು ಹಾಕಿ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕೆಲವರು ದ್ವಿಚಕ್ರ ವಾಹನಗಳಿಂದ ಕರ್ಕಶ ಶಬ್ದ ಮಾಡಿ ಕಿರಿಕಿರಿ ಉಂಟುಮಾಡುತ್ತಿರುವುದು. ಪಟ್ಟಣದಲ್ಲಿ ಕೆಲವು ಲಾರಿಗಳು ಓವರ್​ ಲೋಡ್​ ಹಾಕಿಕೊಂಡು ರಸ್ತೆಗಳನ್ನೇಲ್ಲ ಹಾಳು ಮಾಡುತ್ತಿದ್ದಾರೆ ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕು. ದಿನಕ್ಕೆ ಎರಡು ರಿಂದ ಮೂರು ಬಾರಿ ಗಸ್ತು ತಿರುಗಿ ಪುಂಡ ಪೋಕರಿಗಳಿಗೆ ಬುದ್ದಿ ಕಲಿಸಬೇಕು ಎಂದು ಸಭೆಯಲ್ಲಿದ್ದ ಮುಖಂಡರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net