ಶಾಲೆಗಳ ಮೂಲಸೌಕರ್ಯಕ್ಕೆ ಒತ್ತು

1
ರಾಯಬಾಗದಲ್ಲಿ ಶಾಸಕ ಡಿ.ಎಂ.ಐಹೊಳೆಗೆ ಜಲಾಲಪುರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ.ಬಿ.ಬನಶಂಕರಿ ಹಾಗೂ ಶಾಲಾ ಸಲಹಾ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ಮೌಲಾನ್ ನದಾಫ್, ಸದಾಶಿವ ಘೋರ್ಪಡೆ, ಮಲ್ಲು ಜಗದಾಳೆ, ಸದಾಶಿವ ಜಗದಾಳೆ, ರಾಜು ಜಾಧವ ಇತರರಿದ್ದರು
Published on

ರಾಯಬಾಗ: ತಾಲೂಕಿನ ಜಲಾಲಪುರ ಗ್ರಾಮದ ಡಿ.ಜೆ.ಹೇರವಾಡೆ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳು ಶಿಥಿಲಗೊಂಡಿವೆ. ಅವುಗಳ ದುರಸ್ತಿಗೆ ಅನುದಾನ ಮಂಜೂರು ಮಾಡಿವಂತೆ ಶಾಸಕ ಡಿ.ಎಂ.ಐಹೊಳೆ ಅವರಿಗೆ ಶಾಲೆ ಮುಖ್ಯ ಶಿಕ್ಷಕ ವಿ.ಬಿ.ಬನಶಂಕರಿ ಹಾಗೂ ಶಾಲಾ ಸಲಹಾ ಸಮಿತಿ ಸದಸ್ಯರು ಶನಿವಾರ ಮನವಿ ಸಲ್ಲಿಸಿದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಬೋಧನೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು. ಕ್ಷೇತ್ರದ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರದಿಂದ ಹಣ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷ ಮೌಲಾನ್ ನದಾಫ್, ಸದಾಶಿವ ಘೋರ್ಪಡೆ, ಮಲ್ಲು ಜಗದಾಳೆ, ಸದಾಶಿವ ಜಗದಾಳೆ, ರಾಜು ಜಾಧವ, ನಾಮದೇವ ಕಾಂಬಳೆ, ಬಸವರಾಜ ಅವನ್ನವರ, ಪಾಂಡುರಂಗ ಹವಾಲ್ದಾರ್, ಬಸಗೌಡ ಪಾಟೀಲ, ಬಾಬುರಾವ ಅಂಬರಗೆ, ನಾನಾಸಾಬ್ ಸೋನಾರ, ವಿನಾಯಕ ಪವಾರ, ರೋಹಿತ ಹೆರವಾಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net