ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತು

11Rayabag1
Published on

ರಾಯಬಾಗ: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಜಿಪಂ ಇಲಾಖೆಯಿಂದ ಮಂಜೂರಾದ ೫೦ ಲಕ್ಷ ರೂ. ಅನುದಾನದಲ್ಲಿ ಕಂಕಣವಾಡಿ-ಕೊಡ್ಡಿನ ತೋಟದ ರಸ್ತೆ ಡಾಂಬರೀಕರಣ ಮತ್ತು ೨೦ ಲಕ್ಷ ರೂ. ಅನುದಾನದಲ್ಲಿ ಕಂಕಣವಾಡಿ-ಸವಸುದ್ದಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಕೃಷಿ ಬೆಳೆಗಳನ್ನು ಶೀಘ್ರ ಮಾರುಕಟ್ಟೆಗಳಿಗೆ ಸಾಗಿಸಲು ಮತ್ತು ಗ್ರಾಮೀಣ ಭಾಗದ ಜನರು ತಾಲೂಕು ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಿಗೆ ಪ್ರಯಾಣಿಸಲು ಗುಣಮಟ್ಟದ ರಸ್ತೆಗಳು ಅವಶ್ಯವಾಗಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ಶೀಘ್ರವಾಗಿ ನಿರ್ಮಿಸುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

ಜಿಪಂ ಎಇಇ ವಿ.ಆರ್.ಭಜಂತ್ರಿ, ಮುಖಂಡರಾದ ಸದಾಶಿವ ಘೋರ್ಪಡೆ, ರಾಜಶೇಖರ ಖನದಾಳೆ, ಅಪ್ಪಾಸಾಹೇಬ ಬ್ಯಾಕೂಡೆ, ನಟರಾಜ ಮಾವರಕರ, ಹಾಲಪ್ಪ ಪೀರಗೀಪಾಟೀಲ, ಭೀಮಪ್ಪ ನಾಯಿಕವಾಡಿ, ರಮೇಶ ಪೂಜಾರಿ, ಬಸವರಾಜ ಬೆಳಕೂಡ, ಮಹಾಂತೇಶ ಹತ್ತರಕಿ, ಅಶೋಕ ಪಾಮದಿನ್ನಿ, ವೀರೇಂದ್ರ ಬ್ಯಾಕೂಡೆ, ವಿಠ್ಠಲ ಗುಡೆನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net