ಅಗತ್ಯ ಕಾಮಗಾರಿಗೆ ಒತ್ತು

ಅಗತ್ಯ ಕಾಮಗಾರಿಗೆ ಒತ್ತು
Published on

ರಾವಂದೂರು: ಗ್ರಾಮಗಳಲ್ಲಿ ಅಗತ್ಯವಿರುವ ಕಾಮಗಾರಿಗಳನ್ನು ನಡೆಸಲು ಆದ್ಯತೆ ಮೇಲೆ ಕ್ರಮ ವಹಿಸಲಾಗುವುದು ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕು ಮಾಳೇಗೌಡನ ಕೊಪ್ಪಲು ಹಾಗೂ ಎಚ್ ಮಠದಕೊಪ್ಪಲು, ವಡ್ಡರಹಳ್ಳಿ, ಸಂಗರ ಶೆಟ್ಟಹಳ್ಳಿ, ಮಾದೇಶ್ವರ ಮಠದ ಕೊಪ್ಪಲು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಜನರಿಗೆ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದರು.

ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ತಾಲೂಕು ಆಶ್ರಯ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್, ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಸರಸ್ವತಿ, ಲೋಕೇಶ್, ಗ್ರಾ.ಪಂ. ಅಧ್ಯಕ್ಷ ಗಂಗಾಧರ್, ಪುಟ್ಟರಾಜು, ಪ್ರೀತಿ ಮಲ್ಲಿಕಾರ್ಜುನ್, ರಾಜೇಗೌಡ, ಕೀರ್ತಿ, ಮಾದೇಗೌಡ, ಡಾ. ಶಂಕರ್, ಪಿಡಿಒ ಮನು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net