ಜನಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಮೂಲಸೌಕರ್ಯಕ್ಕೆ ಒತ್ತು

CTD 5 MLA-04
Published on

ಚಿತ್ರದುರ್ಗ:  ಚಿತ್ರದುರ್ಗ ದಿನೇ ದಿನೆ ಬೆಳೆಯುತ್ತಿದ್ದು ಬೆಳವಣಿಗೆಗೆ ತಕ್ಕಂತೆ ಮೂಲ ಸೌಲಭ್ಯಗಳ ಅಗತ್ಯ ಮನಗಂಡು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ನಗರದ ಚಳ್ಳಕೆರೆ ರಸ್ತೆಯ ವಸಂತ ನಗರದಲ್ಲಿ ಭದ್ರಾ ಮೇಲ್ದಂಡೆ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಲ್ಲಿ ನಿರ್ಮಿಸುವ ಸಿಸಿ ರಸ್ತೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಭದ್ರಾ ಮೇಲ್ದಂಡೆಯಿಂದ 75 ಲಕ್ಷ ರೂ. ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ 1 ಕೋಟಿ ಸೇರಿ ಒಟ್ಟು 1.75 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ. ನಗರದಲ್ಲಿ ಮುಖ್ಯರಸ್ತೆ ಜತೆಗೆ ಇತರೆ ರಸ್ತೆಗಳ ಅಭಿವೃದ್ಧಿಗೂ ಒತ್ತು ನೀಡಿದ್ದಾಗಿ ತಿಳಿಸಿದರು. ವಸಂತ ನಗರ ನಿವಾಸಿಗಳಾದ ಸದಾನಂದ,ಪ್ರವೀಣ್,ಗೋಪಿಕೃಷ್ಣ, ಸತೀಶ್, ಪೋಲಿಸ್ ರಂಗನಾಥ್, ತಿಮ್ಮರಾಜ್,ಶಿವಣ್ಣ,ಮಂಜುನಾಥ್,ರಾಜು,ಶ್ರಾವಂತಿ,ಪವಿತ್ರಾ,ಪ್ರತಿಭಾ,ಶಾಂತಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net