ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಿ

27 Ylb 04
ಯಲಬುರ್ಗಾದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛ ಆಸ್ಪತ್ರೆ ನಮ್ಮ ಆದ್ಯತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ವೈದ್ಯಾಧಿಕಾರಿ ಕೃಷ್ಣಾ ಹೊಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪ್ರಕಾಶ್ ಛಲವಾದಿ, ವೈದ್ಯರಾದ ಡಾ.ಶೇಖರ ಭಜಂತ್ರಿ, ಡಾ.ಮಿನು, ಡಾ.ಮಾರುತಿ, ಡಾ.ಪ್ರಸಾದಕುಮಾರ್, ಸಹಾಯಕ ಆಡಳಿತ ಅಧಿಕಾರಿ ಚಂದ್ರಶೇಖರ ಇದ್ದರು.
Published on

ಯಲಬುರ್ಗಾ: ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಸಾರ್ವಜನಿಕರು ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಕೃಷ್ಣಾ ಹೊಟ್ಟಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತೆ ಸೇವಾ ಕಾರ್ಯಕ್ರಮದಡಿ ಸ್ವಚ್ಛ ಆಸ್ಪತ್ರೆ ನಮ್ಮ ಆದ್ಯತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆಸ್ಪತ್ರೆ ಒಳಗೆ ಮತ್ತು ಹೊರಗೆ ತ್ಯಾಜ್ಯ ಎಸೆಯುವುದು ಉಗುಳುವುದು ಮಾಡಬಾರದು. ಆಸ್ಪತ್ರೆಯನ್ನು ಮನೆಯಂತೆ ಕಾಣಬೇಕು. ಆಸ್ಪತ್ರೆಗಳಿಗೆ ಬರುವ ರೋಗಿಗಳು ಮತ್ತು ಸಾರ್ವಜನಿಕರು ಸ್ವಚ್ಛತೆಗೆ ಒತ್ತು ನೀಡಿ.

ಆರೋಗ್ಯಕರ ಪರಿಸರ ನಿರ್ಮಾಣ ಉದ್ದೇಶದಿಂದ ಇಲಾಖೆ ಸ್ವಚ್ಛತೆಗೆ ಒತ್ತು ನೀಡಿದ್ದು ಎಲ್ಲರೂ ಕೈಜೋಡಿಸಬೇಕು. ಆರೋಗ್ಯ ಇಲಾಖೆ ಮೂಲಕ ಸರ್ಕಾರಗಳು ನಾನಾ ಯೋಜನೆ ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪ್ರಕಾಶ್ ಛಲವಾದಿ, ವೈದ್ಯರಾದ ಡಾ.ಶೇಖರ ಭಜಂತ್ರಿ, ಡಾ.ಮಿನು, ಡಾ.ಮಾರುತಿ, ಡಾ.ಪ್ರಸಾದಕುಮಾರ್, ಸಹಾಯಕ ಆಡಳಿತ ಅಧಿಕಾರಿ ಚಂದ್ರಶೇಖರ್ ಅಣ್ಣಿಗೇರಿ, ಶಿವಾನಂದ ಸಿಂದೋಗಿ, ಸಿಬ್ಬಂದಿ ಸಂಗಪ್ಪ ಕುರಿ, ವಿದ್ಯಾಶ್ರೀ, ಅಜ್ಮೀರ್, ಶಿವರಾಜಪ್ಪ ಯರಗೇರಿ, ಶರಣಪ್ಪ, ಶಿವಕುಮಾರ ಐನಕ್ಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net