ರೈತರ ಸಾಲಮನ್ನಾ, ನೀರಾವರಿ ಯೋಜನೆಗೆ ಒತ್ತು

11-MDG-1P1
Published on

ಮೂಡಿಗೆರೆ: ಮುಖ್ಯಮಂತ್ರಿ, ಕೇಂದ್ರಸಚಿವ, ರಾಜ್ಯಪಾಲ ಮತ್ತು ವಿಧಾನಸಭಾಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯಕಂಡ ಅತ್ಯುತ್ತಮ ರಾಜಕಾರಣಿ. ಅವರ ನಿಧನದಿಂದ ರಾಜಕಾರಣದ ಪ್ರಮುಖ ಕೊಂಡಿ ಕಳಚಿದಂತಾಗಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದಾಗ ಐಟಿ ಬಿಟಿ ಸ್ಥಾಪನೆ, ವಿಕಾಸ ಸೌಧ ನಿರ್ಮಾಣ. ಮೆಟ್ರೋ ರೈಲ್ವೆ ಕಾಮಗಾರಿಗೆ ಚಾಲನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದ್ದರು. ರೈತರ ಸಾಲಮನ್ನಾ, ನೀರಾವರಿ ಯೋಜನೆಗೆ ಒತ್ತು ನೀಡಿದ್ದರು. ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪುಗಳನ್ನು ರಚಿಸಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದರು. ಎಲ್ಲ ಮಹಿಳೆಯರು ಬ್ಯಾಂಕ್ ಖಾತೆ ತೆರೆಯುವಂತೆ ಯೋಜನೆ ರೂಪಿಸಿದ್ದರು ಎಂದರು.

ರಾಜೀವ್ ಯುವಶಕ್ತಿ ಸಂಘ ರಚಿಸಿ ಯುವಕರು ಸಂಘಟಿತರಾಗಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನಡೆಸಲು ಪ್ರೇರಣೆ ನೀಡಿ ಅನುದಾನ ಒದಗಿಸಿದ್ದರು. ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿದ್ದಾಗ ವಿದೇಶಾಂಗ ನೀತಿ, ಆಮದು, ರಫ್ತು ನೀತಿಯಲ್ಲಿ ಸುಧಾರಣೆ ತಂದರು. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ದೇಶದಲ್ಲೇ ಅತ್ಯುತ್ತಮ ರಾಜ್ಯಪಾಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.

ಪಪಂ ಸದಸ್ಯರಾದ ಹೊಸಕೆರೆ ರಮೇಶ್, ಸಿ.ಬಿ.ಶಂಕರ್, ಜಯಮ್ಮ, ಮಾಜಿ ತಾಪಂ ಅಧ್ಯಕ್ಷ ಎ.ಜಿ.ಸುಬ್ರಾಯ ಗೌಡ, ಸುಬ್ರಹ್ಮಣ್ಯ, ಕಲ್ಪನಾ, ಷಣ್ಮುಖಾನಂದ, ಚಂದ್ರೇಶ್, ಕುನ್ನಳ್ಳಿ ರವಿ, ಉಗ್ಗೆಹಳ್ಳಿ ಸುರೇಂದ್ರ, ಸಿ.ಎಚ್.ಅಹಮದ್ ಬಾವ, ಹರೀಶ್ ಸಬ್ಬೇನಹಳ್ಳಿ, ಸುಧೀರ್, ಸುಬ್ರಹ್ಮಣ್ಯ ಚಕ್ರಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net