ಶೈಕ್ಷಣಿಕ ಬಲವರ್ಧನೆಗೆ ಒತ್ತು

Emphasis on educational reinforcement
Emphasis on educational reinforcement
Published on

ತೇರದಾಳ(ಗ್ರಾ): ಇಲಾಖೆಯು 2024-25ನೇ ಶೈಕ್ಷಣಿಕ ವರ್ಷವನ್ನು ಶೈಕ್ಷಣಿಕ ಬಲವರ್ಧನೆ ವರ್ಷವನ್ನಾಗಿ ಘೋಷಿಸಿದೆ. ಅಜೀಂ ಪ್ರೇಮ್‌ಜಿ ೌಂಡೇಷನ್ ಸಹಯೋಗದಲ್ಲಿ ಐದು ಮಾಸಿಕ ಸಮಾಲೋಚನೆ ಸಭೆಗಳನ್ನು ಯಶಸ್ವಿಗೊಳಿಸಲಾಗಿದೆ ಎಂದು ೌಂಡೇಷನ್ ಪ್ರತಿನಿಧಿ ಶ್ರೀಶೈಲ ದಾವಲಟ್ಟಿ ಹೇಳಿದರು.

ಸ್ಥಳೀಯ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜೀಂ ಪ್ರೇಮ್‌ಜಿ ೌಂಡೇಷನ್ ಸಹಯೋಗದಲ್ಲಿ ಶಾಲಾ ಶಿಕ್ಷಣ ಇಲಾಖೆಯವರು ತೇರದಾಳ ಪೂರ್ವ ತೇರದಾಳ ಪಶ್ಚಿಮ ಗೋಲಭಾವಿ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ಶಾಲೆಗಳ ನಲಿಕಲಿ ತರಗತಿ ಬೋಧಿಸುವ ಶಿಕ್ಷಕರ ಸಮಾಲೋಚನಾ ಸಭೆಯನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.

ಈ ಎಲ್ಲ ಸಮಾಲೋಚನಾ ಸಭೆಗಳ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ಆಸಕ್ತರು ಲೇಖನಗಳನ್ನು ನೀಡಿದರೆ ಕೃತಿ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.

ತೇರದಾಳ ಪಶ್ಚಿಮ ವಲಯದ ಸಿ.ಆರ್.ಪಿ. ಅನಂತರಾಜು ಮುಧೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ನಲಿಕಲಿ ವಿಶಿಷ್ಟ ಚಟುವಟಿಕೆ ಮೂಲಕ ಮಕ್ಕಳಿಗೆ ಸಂತಸದಾಯಕ ಕಲಿಕೆ ಉಂಟಾಗುತ್ತದೆ. ಸಮಾಲೋಚನೆ ಸಭೆಗಳು ಬೋಧನೆಗೆ ಅಗತ್ಯ ಮಾರ್ಗದರ್ಶನ ನೀಡುತ್ತವೆ ಎಂದರು.

ತೇರದಾಳ ಪೂರ್ವ ಸಿ.ಆರ್.ಪಿ. ಮಹೇಶ ಸೋರಗಾವಿ ಮಾತನಾಡಿ, ಈ ಸಮಾಲೋಚನಾ ಸಭೆಗಳು ಅವಶ್ಯಕ. ಇಲ್ಲಿನ ಚಟುವಟಿಕೆಯನ್ನು ಶಿಕ್ಷಕರು ತರಗತಿಯಲ್ಲಿ ಅನುಷ್ಠಾನಗೊಳಿಸಬೇಕು. ಬೋಧನೆಯಲ್ಲಿ ಬರುವ ಸಮಸ್ಯೆಗಳನ್ನು ಸಮಾಲೋಚನಾ ಸಭೆಗಳಲ್ಲಿ ಚರ್ಚಿಸಬೇಕು ಎಂದರು.

ಶಾಲಾ ಮುಖ್ಯಶಿಕ್ಷಕ ಕೆ.ಡಿ. ಮಾಲಗಾವಿ ಇದ್ದರು.

ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಗೋಲಬಾವಿ ನಂ.1 ಶಿಕ್ಷಕ ಮ.ಕೃ. ಮೇಗಾಡಿ, ಗಣಿತ ವಿಷಯವನ್ನು ವೀರಭದ್ರಪ್ಪ ಎನ್.ಎ., ಇಂಗ್ಲೀಷ್ ವಿಷಯವನ್ನು ಮಂಜುನಾಥ ಎಚ್.ಆರ್., ಮತ್ತು ಪಿ.ಬಿ. ಹವಾಲ್ದಾರ ತರಬೇತಿ ನೀಡಿದರು. ಎಸ್.ಬಿ. ಪುಲೋಜಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net