ಹೊಸ ಬಡಾವಣೆಗಳ ಅಭಿವೃದ್ಧಿಗೆ ಒತ್ತು

16 abbayya
Published on

ಹುಬ್ಬಳ್ಳಿ: ಹು-ಧಾ ಪೂರ್ವ ಕ್ಷೇತ್ರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕ್ಷೇತ್ರದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಹೊಸ ಬಡವಾಣೆಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ 80ನೇ ವಾರ್ಡ್‌ನಲ್ಲಿ ನೇಕಾರ ನಗರದ ಅಮರಜ್ಯೋತಿ ಕಾಲನಿ ಮತ್ತು ಸಿಂಧೆ ಪ್ಲಾಟ್‌ನಲ್ಲಿ 63 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಪೇವಿಂಗ್ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ 10 ವರ್ಷದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರತಿಯೊಬ್ಬರಿಗೂ ಅಗತ್ಯ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಪಾಲಿಕೆ ಸದಸ್ಯರಾದ ಶಿವಗಂಗಾ ಮಾನಶೆಟ್ಟರ, ಶಾಂತಾ ಹಿರೇಮಠ, ಮುಖಂಡರಾದ ರಾಜಕುಮಾರ ಕಾಮರೆಡ್ಡಿ, ಮಂಜುನಾಥ ಚಿಂತಗಿಂಜಲ್, ಶ್ರೀನಿವಾಸ ಕಾಂಬಳೆ, ರಾಕೇಶ ಪಲ್ಲಾಟೆ, ಕಾಶಿನಾಥ ಪವಾರ, ಗಜಾನನ ಮೆಹರವಾಡೆ, ಜಗದೀಶ ಬಡಿಗೇರ, ಪ್ರಶಾಂತ ರಾಂಪುರ, ಶಿವು ಮಡಿವಾಳರ, ಶಿವಯ್ಯ ಹಿರೇಮಠ, ಸುಮಿತ್ರಾಬಾಯಿ ಕೊಪ್ಪದ, ಮಹೇಶ ಗೋಕುಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net