ಸವದತ್ತಿ ಸಮಗ್ರ ಅಭಿವೃದ್ಧಿಗೆ ಒತ್ತು

30SAVADATTI1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 49;
Published on

ಸವದತ್ತಿ, ಸಮಗ್ರ ಅಭಿವೃದ್ಧಿಗೆ, ಒತ್ತು,

ಸವದತ್ತಿ: ರಾಜ್ಯದಲ್ಲಿಯೇ ಸವದತ್ತಿ ಯಲ್ಲಮ್ಮ ೇತ್ರಕ್ಕೆ ಹೆಚ್ಚಿನ ಅನುದಾನದ ನೀಡಲಾಗಿದ್ದು, ಅದನ್ನು ಮಾದರಿ ೇತ್ರ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಭಗೀರಥ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 6 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಗುಣಮಟ್ಟದ ಕಾಮಗಾರಿಗೆ ಮಾಡಲು ಗುತ್ತಿಗೆದಾರರು ಆದ್ಯತೆ ನೀಡಬೇಕು. ಅಧಿಕಾರಿಗಳು ಹಾಗೂ ಜನಸಾಮಾನ್ಯರು ನಿಗಾವಹಿಸಿ ಸುಸಜ್ಜಿತ ರಸ್ತೆ ನಿರ್ಮಿಸಿಕೊಳ್ಳಬೇಕು ಎಂದು ಸೂಚಿಸಿದರು.

ಶಾಸಕ ವಿಶ್ವಾಸ ವೆದ್ಯ ಮಾತನಾಡಿ, 6 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿಯಿಂದ ಹಿರೇ ಉಳ್ಳಿಗೇರಿವರೆಗೆ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸವದತ್ತಿ & ಮುನವಳ್ಳಿ ರಸ್ತೆ ಅಭಿವದ್ಧಿಗೆ 19 ಕೋಟಿ ರೂ., ಯರಜರ್ವಿ& ಕಡಬಿಗೆ 16 ಕೋಟಿ ರೂ., ಕರೀಕಟ್ಟಿ ವತ್ತದಿಂದ ಭಗೀರಥ ವತ್ತದವರೆಗೆ ಸಿಸಿ ರಸ್ತೆಗೆ 5 ಕೋಟಿ ರೂ., ಸುಮಾರು 2.5 ಕೋಟಿ ರೂ. ಕ್ರೀಡಾಂಗಣ ಅಭಿವದ್ಧಿಗೆ, 1 ಕೋಟಿ ರೂ. ವೆಚ್ಚದಲ್ಲಿ ಸ್ಮಶಾನ ಅಭಿವದ್ಧಿ, ಅರಬಾವಿ& ಚಳ್ಳಿಕೇರಿ ರಸ್ತೆ ಕಾಮಗಾರಿಗೆ 7 ಕೋಟಿ ರೂ., 3 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಸೌಂದಯೀರ್ಕರಣಕ್ಕಾಗಿ ಎಪಿಎಂಸಿಯಿಂದ ಭಗೀರಥ ವತ್ತದವರೆಗೂ ಅಲಂಕಾರಿಕ ದೀಪಗಳ ಅಳವಡಿಕೆಗೆ ಕಾರ್ಯಕ್ಕೆ ಅನುದಾನ ನೀಡುವ ಮೂಲಕ ೇತ್ರದ ಸಮಗ್ರ ಅಭಿವದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೆಚ್ಚಿನ ಸಹಕಾರ ನೀಡಿದ್ದಾರೆ. ಅವರ ಸಹಕಾರ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.

ಮಾಜಿ ಶಾಸಕ ಆರ್​.ವಿ. ಪಾಟೀಲ, ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ, ಎಪಿಎಂಸಿ ಅಧ್ಯ ಚಂದ್ರು ಪೂಜೇರ, ಲೋಕೋಪಯೋಗಿ ಎಇಇ ವಿಜಯ ಸಂಗಪ್ಪಗೋಳ, ಮಲಿಕ್​ಸಾಬ್​ ಬಾಗವಾನ್​, ಉಮೇಶ ಬಾಳಿ, ಮಂಜುನಾಥ ಪಾಚಂಗಿ, ಬಸವರಾಜ ಅರಮನಿ, ಪ್ರವಿಣ ರಾಮಪ್ಪನವರ, ಮಲ್ಲು ಜಕಾತಿ, ದಿಲಾವರ ಸನದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net