ಗದಗ ಜಿಲ್ಲೆಯಲ್ಲಿ ಎಎಪಿ ಸಂಘಟನೆಗೆ ಒತ್ತು

aap logo
Published on

ಗದಗ: ಮುಂಬರುವ ಜಿಪಂ, ತಾಪಂ ಚುನಾವಣೆಗಾಗಿ ಜಿಲ್ಲೆಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು (ಎಎಪಿ) ಬೇರುಮಟ್ಟದಿಂದ ಸಂಘಟಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಹೇಳಿದ್ದಾರೆ.

ಮಂಗಳವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗದಗ ಜಿಲ್ಲೆ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಸಾವಿರಾರು ಕೋಟಿ ರೂ. ಅನುದಾನ ಬಳಕೆಯಾದರೂ ಕುಡಿಯುವ ನೀರು ಪೂರೈಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಜಿಲ್ಲೆಯ ಈ ದುಃಸ್ಥಿತಿ ವಿರುದ್ಧ ಆಪ್ ಹೋರಾಟ ಮಾಡಲಿದೆ. ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಈ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಹೋರಾಟ ಕೈಗೊಳ್ಳಲಾಗುವುದು ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಎ.ವೈ. ನವಲಗುಂದ, ಜಗದೀಶ, ಅರ್ಜುನ ಹಲಗಿಗೌಡರ, ರವಿಕುಮಾರ, ಫರೀದ ನದಾಫ್, ದಾದಾಪೀರ ಕಲೇಗಾರ, ಜಾಕೀರ್, ಶಫಿ ಖಾನ್, ಸುಭಾಸ್ ಕುಂಬಾರ, ವೆಂಕಟೇಶ ಗುಗ್ಗರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net