ರೋಗಿಗಳೊಂದಿಗೆ ಸಹಾನುಭೂತಿ ಅಗತ್ಯ

19 Dwd 2
Published on

ಧಾರವಾಡ: ವೈದ್ಯರು ರೋಗಗಳನ್ನು ಶೀಘ್ರ ಗುಣಪಡಿಸಬೇಕಾಗಿರುವುದರಿಂದ ಹೆಚ್ಚಿನ ಸಮಯವನ್ನು ರೋಗಿಗಳೊಂದಿಗೆ ಸಹಾನುಭೂತಿಯಿಂದ ಕಳೆಯಬೇಕು ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ ಹೇಳಿದರು.
ನಗರದ ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ದವಡೆ ಮತ್ತು ಬಾಯಿಯ ಸರ್ಜರಿ ವಿಭಾಗದಿಂದ ಕರ್ನಾಟಕ ಅಸೋಸಿಯೇಶನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ಸ್ ೧೦ನೇ ವಾರ್ಷಿಕ ರಾಜ್ಯ ಸಮ್ಮೇಳನವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ದೂರದೃಷ್ಟಿಯುಳ್ಳವರಾಗಿರಬೇಕು. ಉತ್ತಮ ಸಹೋದ್ಯೊಗಿಗಳಾಗುವುದರೊಂದಿಗೆ ಮತ್ತು ಕ್ಲಿಷ್ಟಕರ ಸಮಯವನ್ನು ಎದುರಿಸಲು ಉತ್ತಮ ವೈದ್ಯರ ತಂಡವನ್ನು ನಿರ್ಮಿಸುವುದು ಅಗತ್ಯ. ರೋಗಿಗಳ ಚಿಕಿತ್ಸೆಗೆ ಸದಾ ಮುಂಚೂಣಿಯಲ್ಲಿರಬೇಕು. ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಹೊಂದಬೇಕು ಎಂದರು.
ಓರಲ್ ಸರ್ಜರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ದಂತ ವೈದ್ಯರಾದ ಡಾ. ಕೆ.ಎಂ. ಕರಿಯಪ್ಪ, ಡಾ. ಪೌಲ್ ಸಿ. ಸಾಲಿನ್ಸ್, ಡಾ. ರಾಜೇಂದ್ರ ಪ್ರಸಾದ್ ಮತ್ತು ಡಾ. ಅನೀಸ್ ಅಹಮದ್ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆ.ಎಲ್.ಇ. ದಂತ ಮಹಾವಿದ್ಯಾಲಯದ ಓರಲ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಕೊಟ್ರಶೆಟ್ಟಿ ಅವರು ಡಾ. ಸಿ.ಇ. ರಾಜು ಸ್ಮರಣಾರ್ಥ ಮಿಲೇನಿಯಲ್ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ಕುರಿತು ಉಪನ್ಯಾಸ ನೀಡಿದರು. ಸಮ್ಮೇಳನದಲ್ಲಿ ಸುಮಾರು ೩೫೦ ಪ್ರತಿನಿಽಗಳು ಭಾಗವಹಿಸಿದ್ದರು.
ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಡಾ. ನೈದಿಲ ಶೆಟ್ಟಿ, ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ. ಆನಂದ ತಾವರಗೆರೆ ಮತ್ತು ಡಾ. ಲೇಖಾ ಪಿ., ಅಸೋಸಿಯೇಷನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ಸ್ನ ರಾಷ್ಟಾçಧ್ಯಕ್ಷ ಡಾ. ವಿಕಾಸ ಧೂಪರ, ಡಾ. ಎಸ್. ಗಿರೀಶ ರಾವ್, ಡಾ. ಶ್ರೀನಾಥ ಎನ್.,ಡಾ. ನಾಗರಾಜಪ್ಪ ದಾಸ್, ಡಾ. ಅಭಯ್ ಕಾಮತ್, ಇತರರಿದ್ದರು.
ಡಾ. ಕೃತಿಕಾ ಶಾಸ್ತಿç ಮತ್ತು ಡಾ. ಪ್ರಿಯಂ ನಿರೂಪಿಸಿದರು. ಡಾ. ಕೆ. ಗೋಪಾಲಕೃಷ್ಣ ಸ್ವಾಗತಿಸಿದರು. ಡಾ. ಅನಿಲಕುಮಾರ ದೇಸಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net