ಹಳೆಗನ್ನಡ ಓದಲು ಭಾಷೆಗಿಂತ ಭಾವ ಮುಖ್ಯ

ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಳೆಗನ್ನಡ ಓದು ನಿರ್ವಚನ ಕಾರ್ಯಕ್ರಮವನ್ನು ಪ್ರಾಚಾರ್ಯ ಎಂ.ಶಿವಯ್ಯ ಉದ್ಘಾಟಿಸಿದರು. ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕೆ.ಖಾದರ್ ಬಾಷಾ, ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ, ಐಕ್ಯೂಎಸಿ ಸಂಚಾಲಕ ಬಸವರಾಜ ತಡಕಲ್, ಸಹಾಯಕ ಪ್ರಾಧ್ಯಾಪಕ ಮುದ್ದಯ್ಯ ನಾಯಕ ಇತರರಿದ್ದರು.

Published on

ಸಿಂಧನೂರು: ಯುವಜನರಿಗಾಗಿ ಹಳೆಗನ್ನಡ ಕಾವ್ಯಗಳನ್ನು ಓದುವ, ಅರ್ಥೈಸುವ ಹಾಗೂ ನಿರ್ವಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಳೆಗನ್ನಡ ಓದುವುದಕ್ಕೆ ಭಾಷೆಗಿಂತ ಭಾವ ಮುಖ್ಯ ಎಂದು ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಳೆಗನ್ನಡ ಓದು ನಿರ್ವಚನ ಕಾರ್ಯಕ್ರಮದಲ್ಲಿ ಪಂಪನ ವಿಕ್ರಮಾರ್ಜುನ ವಿಜಯ ಹಾಗೂ ರನ್ನನ ಗದಾಯುದ್ಧದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಳೆಗನ್ನಡ ಓದುವ ಕಾರ್ಯಕ್ರಮ ಉಪಯುಕ್ತವಾದದ್ದು. ಎಲ್ಲ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಸರಳ ಭಾಷೆ. ಒಂದು ಶಬ್ದದಲ್ಲಿ ಹಲವಾರು ಅರ್ಥಗಳನ್ನು ಹೊಂದಿದೆ ಎಂದರು.

ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕೆ.ಖಾದರ್ ಬಾಷಾ ಮಾತನಾಡಿ, ಅನ್ಯಭಾಷಿಕರೇ ಸುಲಭವಾಗಿ ಕನ್ನಡ ಓದುವಾಗ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಹಳೆಗನ್ನಡ ಓದು ಕಷ್ಟವಲ್ಲ. ಓದುವಿಕೆ ನಿರಂತರ ವಾಗಿದ್ದರೆ ಹಳೆಗನ್ನಡ ಸರಳವಾಗಲಿದೆ ಎಂದು ತಿಳಿಸಿದರು.

ಶ್ರೀರಾಮನಗರದ ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ.ತಾತಪ್ಪ, ಪ್ರಾಚಾರ್ಯ ಎಂ.ಶಿವಯ್ಯ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಾಜಿ ದೇವೇಂದ್ರಪ್ಪ, ಐಕ್ಯೂಎಸಿ ಸಂಚಾಲಕ ಬಸವರಾಜ ತಡಕಲ್, ಸಹಾಯಕ ಪ್ರಾಧ್ಯಾಪಕರಾದ ಮುದ್ದಯ್ಯ ನಾಯಕ, ಶರಣಪ್ಪ ಹೊಸಳ್ಳಿ, ಯರಿಯಪ್ಪ ಬೆಳಗುರ್ಕಿ, ಡಾ.ಅರುಣಕುಮಾರ ಬೇರ‌್ಗಿ, ಡಾ.ಪರಶುರಾಮ ಕಟ್ಟಿಮನಿ, ವೀರೇಶ ಕನ್ನಾರಿ, ನಾರಾಯಣ ಬೆಳಗುರ್ಕಿ, ಚನ್ನಬಸಪ್ಪ ಮಲ್ಕಂದಿನ್ನಿ, ಸೈಯದ್ ಹಜಗರ ಹುಸೇನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net