

ಮಂಡ್ಯ: ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.21ರಂದು ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿಕ್ಕಮಂಡ್ಯ ವಿತರಣಾ ಕೇಂದ್ರಗಳಾದ ಎಫ್-2 ಷುಗರ್ ಫೀಡರ್ ಮತ್ತು ಎಫ್-3 ಕೆ.ಎಚ್.ಬಿ ಫೀಡರ್‌ನಿಂದ ಜೈನರ ಬೀದಿ, ಪೇಟೆಬೀದಿ, ಷುಗರ್ ಫ್ಯಾಕ್ಟರಿ, ಕಾಳಿಕಾಂಭ ದೇವಸ್ಥಾನದ ಸುತ್ತಮುತ್ತ, ವಿವೇಕಾನಂದನಗರ, ಕೆ.ಎಚ್.ಬಿ ಕಾಲನಿ, ಮಂಜುನಾಥನಗರ, ಚಂದ್ರಶೇಖರ ಲೇಔಟ್, ಬೀಡಿ ಕಾಲನಿ, ಕಾರೇಮನೆ ಗೇಟ್, ಚಿಕ್ಕಮಂಡ್ಯ ಸುತ್ತಮುತ್ತಲಿನ ನಗರ ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.