ಆಯುಷ್ ವೈದ್ಯರ ತುರ್ತು ಸಭೆ

meeting
Published on

ಹಾನಗಲ್ಲ: ಜಿಲ್ಲೆಯಲ್ಲಿರುವ ನೋಂದಾಯಿತ ಆಯುಷ್ ವೈದ್ಯರ ತುರ್ತು ಸಭೆಯನ್ನು ಜ. 7ರಂದು ಹಾವೇರಿಯ ಸಿಂದಗಿ ಶಾಂತವೀರೇಶ್ವರ ಆಯುರ್ವೆದ ಮಹಾವಿದ್ಯಾಲಯದಲ್ಲಿ ಕರೆಯಲಾಗಿದೆ ಎಂದು ಆಯುಷ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯದರ್ಶಿ ಡಾ. ಪ್ರದೀಪ ದೊಡ್ಡಗೌಡರ ತಿಳಿಸಿದ್ದಾರೆ. ಜ. 7ರಂದು ಬೆಳಗ್ಗೆ 10.30ಕ್ಕೆ ನಡೆಯುವ ಸಭೆಯಲ್ಲಿ ಜಿಲ್ಲಾಧ್ಯಕ್ಷ ಡಾ. ಸುನೀಲ ಹಿರೇಮಠ ಅಧ್ಯಕ್ಷತೆ ವಹಿಸುವರು. ಇತ್ತೀಚೆಗೆ ರಾಜ್ಯ ಹಾಗೂ ಜಿಲ್ಲೆಯಲ್ಲಿ ಆಯುಷ್ ವೈದ್ಯರ ವೃತ್ತಿಯಲ್ಲಿ ಎದುರಾಗುತ್ತಿರುವ ಸಮಸ್ಯೆ-ತೊಂದರೆಗಳ ಕುರಿತು ಮತ್ತು ಸಂಘಟನಾತ್ಮಕ ವಿಷಯವಾಗಿ ರ್ಚಚಿಸಲು ಸಭೆ ಕರೆಯಲಾಗಿದೆ. ಜಿಲ್ಲೆಯ ಎಲ್ಲ ನೊಂದಾಯಿತ ಆಯುಷ್ ವೈದ್ಯರು ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net