

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕೆನರಾ ಬ್ಯಾಂಕ್ ನೀಡಿದ ನೂತನ ಆಂಬುಲೆನ್ಸ್ ಅನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸೋಮವಾರ ಜನಸೇವೆಗೆ ಅರ್ಪಿಸಿದರು.
ಬಳಿಕ ಮಾತನಾಡಿ, ತುರ್ತು ವೈದ್ಯಕೀಯ ಸೇವೆ ಸುಧಾರಿಸಲು ಕೆನರಾ ಬ್ಯಾಂಕ್ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆಗಳಿಗೆ ಸಹಕಾರ ನೀಡುತ್ತಿವೆ. ಈ ಅತ್ಯಾಧುನಿಕ ಆಂಬುಲೆನ್ಸ್‌ಗಳು ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಕೆಲವು ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಆಸ್ಪತ್ರೆಯ ಕಾರ್ಯ ಮಾಡುತ್ತದೆ ಎಂದರು. ಕಾಹೆರ್ ಉಪಕುಲಪತಿ ಡಾ.ನಿತಿನ ಗಂಗಾನೆ, ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಡಾ.ವಿ.ಡಿ.ಪಾಟೀಲ, ಜೆಎನ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಉಪಪ್ರಾಚಾರ್ಯ ಡಾ.ರಾಜೇಶ ಪವಾರ, ಡಾ.ವಿ.ಎಂ.ಪಟ್ಟಣಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.(ಕರ್ನಲ್) ಎಂ.ದಯಾನಂದ, ಡಾ.ಎಂ.ವಿ.ಜಾಲಿ, ಕೆಎಲ್‌ಇ ಸಂಸ್ಥೆಯ ಬ್ಯಾಂಕಿಂಗ್ ವ್ಯವಹಾರಗಳ ನಿರ್ದೇಶಕ ಬಸವರಾಜ ಜೇವರಗಿಕರ, ವರ್ಷಾ ಚಿಲ್ಲಾಳ, ಬ್ಯಾಂಕ್‌ನ ಹುಬ್ಬಳ್ಳಿ ವೃತ್ತದ ಡಿಜಿಎಂ ಎಲ್.ಆರ್. ವಿಜಯಶ್ರೀ, ಎಜಿಎಂ ಸಂದೀಪಕುಮಾರ ಅಗರವಾ, ಬೆಳಗಾವಿ ಪ್ರಾದೇಶಿಕ ವಿಭಾಗದ ಎಜಿಎಂ ಎಂ.ವಿದ್ಯಾ, ಚಿಕ್ಕೋಡಿ ಪ್ರಾದೇಶಿಕ ವಿಭಾಗದ ಎಜಿಎಂ ಎಂ.ಪನಿಶಯನ, ಹುಬ್ಬಳ್ಳಿ ಎಂಸಿಬಿಯ ಡಿಎಂ ಚೇತನ ಪೇತುನವರ, ಸಿನಿಯರ್ ಮ್ಯಾನೇಜರ್‌ಗಳಾದ
ಪ್ರತೀಕ ಅಸ್ಕಿ, ದೀಪಕ ಮಗದುಮ ಇತರರಿದ್ದರು.