

ಕೋಟ: ಮಹಿಳೆ ಸ್ವತಂತ್ರವಾಗಿ ಬದುಕಲು ಇಂಥಹ ಕಲಿಕಾ ತರಬೇತಿ ಸಹಕಾರಿಯಾಗಲಿದೆ ಎಂದು ಕೋಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಅಭಿಪ್ರಾಯಪಟ್ಟರು.
ಕೋಟ ಗ್ರಾಪಂ ಸಭಾಂಗಣದಲ್ಲಿ ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ನೇತೃತ್ವದಲ್ಲಿ ಬುಧವಾರ ಪ್ರಕೃತಿ ಸಂಜೀವಿ ಒಕ್ಕೂಟ ಕೋಟ ಗ್ರಾಪಂ ಸಹಯೋಗದೊಂದಿಗೆ ಒಂದು ವಾರಗಳ ಸ್ವ ಉದ್ಯೋಗ ಎಂಬ್ರಾಯ್ಡಿಂಗ್ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಮಾಲತಿ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಆರತಿರಾಜ್ ತರಬೇತುದಾರರಾಗಿದ್ದರು. ವಿಜಯ ಗ್ರಾಮೀಣ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಾಧಿಕಾರಿ ಸಚಿನ್ ಹೆಗ್ಡೆ, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಉಪನ್ಯಾಸಕ ರಾಘವೇಂದ್ರ ಆಚಾರ್, ಪ್ರಕೃತಿ ಸಂಜೀವಿನಿ ಒಕ್ಕೂಟ ಮಾಜಿ ಅಧ್ಯಕ್ಷೆ ಕಲಾವತಿ ಅಶೋಕ್, ಬ್ರಹ್ಮಾವರ ಎನ್‌ಎಲ್‌ಆರ್‌ಎಂ ಸ್ವಾತಿ, ಕೋಟ ಗ್ರಾಮಲೆಕ್ಕಿಗ ರಾಘವೇಂದ್ರ ಹಕ್ಲಾಡಿ ಉಪಸ್ಥಿತರಿದ್ದರು. ಕೃಷಿ ಸಖಿ ಮಮತಾ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಪ್ರೇಮಾ ಪ್ರಭಾಕರ್ ಆಚಾರ್ ನಿರೂಪಿಸಿದರು. ಸಂಜೀವಿನಿ ಒಕ್ಕೂಟದ ಪಶು ಸಖಿ ರೇಷ್ಮಾ ವಂದಿಸಿದರು.