ದೇಶಭಕ್ತರ ಆದರ್ಶ ಅಳವಡಿಸಿಕೊಳ್ಳಿ

2 NRGL 5
Published on

ನರೇಗಲ್ಲ: ಇಲ್ಲಿನ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಿಸಲಾಯಿತು.

ಮುಖ್ಯ ಶಿಕ್ಷಕಿ ಬಿ.ಜಿ. ಶಿರ್ಸಿ ಮಾತನಾಡಿ, ಜೀವನದಲ್ಲಿ ದೇಶಭಕ್ತರ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಎಂ.ವಿ. ಕಡೆತೋಟದ, ಕೆ.ಐ. ಕೋಳಿವಾಡ, ಐ.ಬಿ. ಒಂಟೇಲಿ, ಪೂರ್ಣಿಮಾ ಅಂಗಡಿ, ವಿ.ಪಿ. ಗ್ರಾಮಪುರೋಹಿತ, ಎಸ್.ವಿ. ಹಿರೇಮಠ, ವಿ.ಎಸ್. ಜಾದವ, ಎಸ್.ಕೆ. ಕುಲಕರ್ಣಿ, ಸಾವಿತ್ರಿ ಮಾನ್ವಿ, ಎಂ.ಎಂ. ಸಿಳ್ಳಿನ್, ಗೀತಾ ಶಿಂಧೆ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ, ಅಕ್ಕಮಹಾದೇವಿ ಅಯ್ಯನಗೌಡ್ರ, ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾ ಬೇಗಂ, ನಯನಾ ಜೋಳದ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ವೀಣಾ ಯಾಳಗಿ , ಪದ್ಮಾವತಿ ಅಂಬಿಗೇರ, ಶ್ವೇತಾ ಹಿರೇಮಠ, ನೇತ್ರಾ ಸೋಬಾನದ. ನಂದಿತಾ ರಾಜೂರ, ಗೀತಾ ದಿಂಡೂರ ಇದ್ದರು.

ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಮಾಡಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಬಿ.ವಿ. ದೇಸಾಯಿಪಟ್ಟಿ, ಶಿಕ್ಷಕ ಸಿ.ಕೆ. ಕೇಸರಿ, ಐಶ್ವರ್ಯ ಬಿಂಗಿ, ಪರ್ವಿನ್ ಮುಲ್ಲಾ, ಶಂಕರ ಮಡಿವಾಳ, ರವಿ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net