ಭಗೀರಥರ ಆದರ್ಶ ಮೈಗೂಡಿಸಿಕೊಳ್ಳಿ

Embrace the ideals of Bhagirath
ವಿಜಯಪುರದ ಸ್ಟೇಶನ್​ ರಸ್ತೆಯ ನವರತ್ನ ಹೋಟೆಲ್​ ಬಳಿ ನಿರ್ಮಿಸುತ್ತಿರುವ ಮಹರ್ಷಿ ಭಗೀರಥ ವೃತ್ತದ ಭೂಮಿಪೂಜೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೆರವೇರಿಸಿದರು. ಜಕ್ಕಪ್ಪ ಯಡವೆ, ಜವಾಹರ್​ ಗೋಸಾವಿ, ಶ್ರೀನಿವಾಸ ಅಂಬಲಿ ಮತ್ತಿತರರಿದ್ದಾರೆ.
Published on

ವಿಜಯಪುರ: ಮಹಾತಪಸ್ವಿ ಭಗೀರಥ ಮಹರ್ಷಿಗಳು ಗಂಗೆಯನ್ನು ಧರಿಗಿಳಿಸಿ ಸಕಲ ಜೀವರಾಶಿಗಳಿಗೆ ನೀರು ಕೊಟ್ಟಂತಹ ಮಹಾತ್ಮರು. ಸಮಾಜದ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ನಿತ್ಯ ಕಾರ್ಯಗಳನ್ನು ಭಗೀರಥರ ಹಾಗೆ ಛಲಬಿಡದೆ ಸಾಧಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.

ನಗರದ ಸ್ಟೇಶನ್​ ರಸ್ತೆಯ ನವರತ್ನ ಹೋಟೆಲ್​ ಬಳಿ ಶುಕ್ರವಾರ ನೂತನವಾಗಿ ನಿರ್ಮಿಸುತ್ತಿರುವ ಮಹರ್ಷಿ ಭಗೀರಥ ವೃತ್ತದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಚಿಕ್ಕಲಕಿಯ ಶಿವಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಶಿಕ್ಷಣ, ಸಂಟನೆ, ಹೋರಾಟಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಾವು ಕಾರ್ಯಪ್ರವೃತ್ತರಾಗಬೇಕೆಂದು ಆರ್ಶೀವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಪ್ಪಾರ ಸೇವಾ ಸಂದ ಅಧ್ಯಕ್ಷ ಜಕ್ಕಪ್ಪ ಯಡವೆ ಮಾತನಾಡಿ, ವೃತ್ತ ನಿರ್ಮಿಸಲು ನಗರ ಶಾಸಕರು 11 ಲಕ್ಷ ರೂ. ಅನುದಾನದಲ್ಲಿ ನೀಡಿದ್ದು, ಅವರ ಸಮಾಜಪರ ಕೆಲಸಗಳಿಗೆ ಎಂದಿಗೂ ಉಪ್ಪಾರ ಸಮಾಜ ಋಣಿಯಾಗಿರಲಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಸಿದ್ದು ಗೇರಡೆ, ಪಾಲಿಕೆ ಸದಸ್ಯ ಜವಾಹರ್​ ಗೋಸಾವಿ, ಕಿರಣ ಪಾಟೀಲ, ಸಮಾಜದ ಮುಖಂಡರಾದ ಶ್ರೀನಿವಾಸ ಅಂಬಲಿ, ಆನಂದ ಗಣೂರ, ಯಲ್ಲಪ್ಪ ಬಂಡಿ, ಜೆ.ಎಲ್​. ಕಸ್ತೂರಿ, ರಾಜು ಕಸ್ತೂರಿ, ಪುಂಡಲೀಕ ಉಪ್ಪಾರ, ಮಲ್ಲು ರಾಣಗಟ್ಟಿ, ಸಂಜು ಖೈರಾವ, ಡಾ. ಸುರೇಶ ಕಾಗಲಕರೆಡ್ಡಿ, ಭೀಮಶಿ ಉಪ್ಪಾರ, ರಾವುತಪ್ಪ ಹಾದಿಮನಿ, ಸುರೇಶ ಹಾದಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net