

ತಾಳಿಕೋಟೆ : ವಚನಗಳ ಮೂಲಕ ಸಾಮಾಜಿಕ ಮೌಲ್ಯ ಎತ್ತಿ ಹಿಡಿದ ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಆಚರಿಸಿದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದ ಅವರು, ಚೌಡಯ್ಯ ಬಸವಣ್ಣನ ಸಮಕಾಲಿನದವರಾಗಿದ್ದು, ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಚೌಡಯ್ಯ ಸಮಾಜದ ಅಧ್ಯಕ್ಷ ರಮೇಶ ಮೂಕೀಹಾಳ, ಪುರಸಭೆ ಸದಸ್ಯ ಪರಶುರಾಮ ತಂಗಡಗಿ, ಶಶಿಕಾಂತ ಮೂಕೀಹಾಳ, ಭೀಮಣ್ಣ ತಳವಾರ, ಲಕ್ಷ್ಮಣ ತಳವಾರ, ಬಸವರಾಜ ಯಡಹಳ್ಳಿ, ಪರಶುರಾಮ ಮನಗೂಳಿ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಶ್ರೀಪಾದ ಜೋಶಿ, ಬಸವರಾಜ ಜುಮನಾಳ ಉಪಸ್ಥಿತರಿದ್ದರು.