

ಬೇಲೂರು: ಮಹಾನ್ ಪುರುಷರ ತತ್ವ ಆದರ್ಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ರಂಗೇಗೌಡ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ, ಸಂತ ಕವಿ ಸರ್ವಜ್ಞ ಹಾಗೂ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಂತ ಸೇವಾಲಾಲರು ಮೌಢ್ಯವನ್ನು ಹೋಗಲಾಡಿಸಿ ಸಮಾಜವನ್ನು ಸರಿದಾರಿಗೆ ತಂದರೆ, ಸರ್ವಜ್ಞರು ತಮ್ಮ ಅನುಭವದ ಮೂಲಕ ಸಮಾಜದಲ್ಲಿ ಅಡಗಿದ್ದ ಕಂದಾಚಾರ, ಜಾತೀಯತೆಯನ್ನು ಹೋಗಲಾಡಿಸಲು ಶ್ರಮಿಸಿದರು ಎಂದು ಸ್ಮರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಲತಾ ಮಂಜೇಶ್ವರಿ ಮಾತನಾಡಿ, ಕನ್ನಡದ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುವ ಮೂಲಕ ಸರ್ವಜ್ಞರು ಮನೆ ಮಾತಾಗಿದ್ದಾರೆ. ಅಂತೆಯೇ ಸಂತ ಸೇವಾಲಾಲರು, ಶಿವಾಜಿ ಮಹಾರಾಜರು ಸೇರಿ ಅನೇಕ ಮಹಾತ್ಮರು ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದರು.
ತಹಸೀಲ್ದಾರ್ ನಟೇಶ್, ತಾಪಂ ಉಪಾಧ್ಯಕ್ಷೆ ಜಮುನಾ ಅಣ್ಣಪ್ಪ, ಸದಸ್ಯರಾದ ಹರೀಶ್, ಸೋಮಯ್ಯ, ಶಶಿಕುಮಾರ್, ಸುಮಾ, ಈರಮ್ಮ, ಸಂಗೀತಾ, ಕಮಲಮ್ಮ, ಇಂದಿರಾ, ಇಒ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ವಿವಿಧ ಸಮಾಜದ ಮುಖಂಡರಾದ ತಾರಾನಾಥ ನಾಯಕ್, ರಾಜ್‌ಮಲ್ಲನಾಯಕ್, ಗುರುವೋಜಿರಾವ್, ಡಾ.ಜಗದೀಶ್‌ನಾಯಕ್, ಮಾ.ನ.ಮಂಜೇಗೌಡ, ಬಿಒ ಲೋಕೇಶ್ ಇತರರಿದ್ದರು.