

ಬಾಗೇಪಲ್ಲಿ: ತಾಲೂಕಿನ ಪಾತಪಾಳ್ಯ ಹೋಬಳಿ ವ್ಯಾಪ್ತಿಯ 85 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಾಮರ್ಥ್ಯವುಳ್ಳ ಉದ್ದೇಶಿತ ಘಂಟ್ಲಮಲ್ಲಮ್ಮಕಣಿವೆ ಬಳಿಯ ಡ್ಯಾಂ ನಿಮಾರ್ಣ ಕಾಮಗಾರಿಗೆ ಗ್ರಹಣ ಬಡಿದಿದೆ.
ರಾಜ್ಯ ಸರ್ಕಾರದ ರ್ನಿಲಕ್ಷ$್ಯವೋ, ಜನಪ್ರತಿನಿಧಿಗಳ ಬೇಜವಾಬ್ದಾರಿತನವೋ ಅಥವಾ ಅನುದಾನ ಕೊರತೆಯೋ…? ಯಾವ ಕಾರಣಕ್ಕೆ ಇದು ಡ್ಯಾಂ ಕಾಮಗಾರಿ ಸ್ಥಗಿತಗೊಂಡಿದೆ ಎಂಬುದೇ ತಿಳಿಯದಾಗಿದೆ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಬಾಗೇಪಲ್ಲಿ ತಾಲೂಕಿನ ಡ್ಯಾಂ ನಿಮಾರ್ಣ ಕಾಮಗಾರಿಗೆ ತಾಂತ್ರಿಕ ಮಂಜೂರಾತಿ ದೊರೆತು 6 ವರ್ಷ ಕಳೆದರೂ ಕಾಮಗಾರಿ ಆರಂಭಕ್ಕೆ ಗ್ರಹಣ ಹಿಡಿದಿದೆ ಎಂದರೇ ತಪ್ಪಾಗಲಾರದು.
ತಾಲೂಕು ಕೇಂದ್ರದಿಂದ ಕೇವಲ 14 ಕಿ.ಮೀ ದೂರದ ಘಂಟ್ಲಮಲ್ಲಮ್ಮ ಕಣಿವೆ ಪ್ರದೇಶದ ಎರಡು ಬೆಟ್ಟಗಳ ಮಧ್ಯದಲ್ಲಿ ಹಿರಣ್ಣೇಶ್ವರ ಕೆರೆ ಇದೆ. ಪಾತಪಾಳ್ಯ ಹೋಬಳಿಯ ವಿವಿಧ ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿ ಕೆರೆಯ ಆಯಕಟ್ಟು ಪ್ರದೇಶದಲ್ಲಿದ್ದರೂ ಸಮರ್ಪ ನೀರು ಲಭ್ಯವಾಗುತ್ತಿಲ್ಲ. ಬಾಗೇಪಲ್ಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಳ್ಳುವ ಬಹುತೇಕ ಚುನಾಯಿತ ಜನಪ್ರತಿನಿಧಿಗಳು ಹಲವು ದಶಕಗಳಿಂದ ಘಂಟ್ಲಮಲ್ಲಮ್ಮ ಕಣಿವೆಯಲ್ಲಿ ಅಣೆಕಟ್ಟು ನಿಮಾರ್ಣ ಮಾಡುವ ಕನಸು ಕಂಡಿದ್ದಾರೆ. ಆದರೆ ಯಾರ ಕನಸೂ ಈಡೇರಿಲ್ಲ.
2006ರಲ್ಲೇ ನೀಲಿನೆ ತಯಾರು:
ಕಣಿವೆಯಲ್ಲಿ ಡ್ಯಾಂ ನಿರ್ಮಿಸಿದರೆ ಬಿಳ್ಳೂರು, ತೊಳ್ಳಪಲ್ಲಿ, ಪಾತಪಾಳ್ಯ, ನಾರೇಮದ್ದೆಪಲ್ಲಿ, ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬಹುದು ಎಂಬ ಅಂದಾಜಿನೊಂದಿಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ 2006ರಲ್ಲಿ ನೀಲಿನೆ ತಯಾರಿಸಿದ್ದು, 2018ರಲ್ಲಿ ಡ್ಯಾಂ ನಿಮಾರ್ಣಕ್ಕೆ ಡಿಪಿಆರ್ ಸಿದ್ಧಪಡಿಸಿ 20 ಕೋಟಿ ರೂಪಾಯಿಗಳ ತಾಂತ್ರಿಕ ಮಂಜೂರಾತಿಗೆ ಕಳುಹಿಸಲಾಗಿದೆ.
2018ರಲ್ಲೇ ಡಿಪಿಆರ್ಗೆ ಪ್ರಸ್ತಾವನೆ ಸಲ್ಲಿಕೆ:
ಪಾತಪಾಳ್ಯ ಹೋಬಳಿ ರೈತ ಮುಖಂಡರ ಮನವಿ ಮೇರೆಗೆ ಘಂಟ್ಲಮಲ್ಲಮ್ಮ ಕಣಿವೆ ಬಳಿಯ ಉದ್ದೇಶಿತ ಡ್ಯಾಂ ನಿಮಾರ್ಣ ಸ್ಥಳಕ್ಕೆ 2018 ನವಂಬರ್ 14ರಂದು ಸಣ್ಣ ನೀರಾವರಿ, ಎತ್ತಿನಹೋಳೆ ಯೋಜನೆ ಇಲಾಖೆಯ ತಜ್ಞರು ಭೇಟಿ ನೀಡಿ ಡ್ಯಾಂ ನಿಮಾರ್ಣ ಕುರಿತು ಜಂಟಿ ಸರ್ವೇ ನಡೆಸಿ ನೀಲಿನಕ್ಷೆ ಸಿದ್ಧಪಡಿಸಿ, ಡಿಪಿಆರ್ ಮಾಡಿ ತಾಂತ್ರಿಕ ಮಂಜೂರಾತಿಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಆದರೆ, ಇಲ್ಲಿಯವರೆಗೂ ಡ್ಯಾಂ ನಿಮಾರ್ಣ ವಿಚಾರದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ತಾಲೂಕಿನಲ್ಲಿ ಯಾವುದೇ ರೀತಿಯ ನದಿ ಹಾಗೂ ಶಾಶ್ವತ ಜಲ ಮೂಲಗಳು ಇಲ್ಲದ ಕಾರಣ ಮಳೆಯಾಶ್ರಿತ ನೀರನ್ನಾದರೂ ಸಂಗ್ರಹಿಸಿಕೊಂಡು ಅಂತರ್ಜಲ ವೃದ್ಧಿಸಿಕೊಳ್ಳುವ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಬೇಕಾಗಿದೆ ಎಂಬುದು ಸ್ಥಳಿಯರ ಆಗ್ರಹ.
ಕೋಟ್
ಪಾತಪಾಳ್ಯ ಬಳಿಯ ಘಂಟ್ಲಮಲ್ಲಮ್ಮ ಕಣಿವೆಯಲ್ಲಿ ಸುಸಜ್ಜಿತ ಡ್ಯಾಂ ನಿಮಾರ್ಣ ಮಾಡುತ್ತೇವೆಂದು ಭರವಸೆ ನೀಡಿರುವ ಜನಪ್ರತಿನಿಧಿಗಳು ಭರವಸೆಯನ್ನು ಈಡೇರಿಸಬೇಕು. ಕಣಿವೆ ಪ್ರದೇಶದಲ್ಲಿ ಡ್ಯಾಂ ನಿಮಾರ್ಣ ಮಾಡಿದರೆ ಅಂತರ್ಜಲ ವೃದ್ಧಿಯಾಗಿ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಸ್ಥಳಿಯ ಸಂಸದರು, ಶಾಸಕರು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಡ್ಯಾಂ ನಿಮಾರ್ಣಕ್ಕೆ ಮುಂದಾಗಬೇಕಾಗಿದೆ.
ರಾಮಕೃಷ್ಣ ಹೆಗಡೆ, ತಾಲೂಕು ಕಾರ್ಯದರ್ಶಿ, ರೈತ ಸಂಘ