

ಮುಧೋಳ: ಶಿಬಿರಾರ್ಥಿಗಳು ಶಿಬಿರದ ಅನುಭವವನ್ನು ಅನ್ವಯ ಮಾಡಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಬೇಕು. ಜನ ಸೇವೆಯೇ ಜನಾರ್ಧನ ಸೇವೆ ಎಂಬ ಮಾತನ್ನು ಸದಾ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿರಿ ಎಂದು ಪ್ರಾಚಾರ್ಯ ಎಂ.ಎಂ. ಹಿರೇಮಠ ಹೇಳಿದರು.
ತಾಲೂಕಿನ ಉತ್ತೂರ ಗ್ರಾಮದಲ್ಲಿ ಬಿವಿವಿ ಸಂಘದ ದಾನಮ್ಮದೇವಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಶನಿವಾರ ಆಯೋಜಿಸಿದ್ದ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ವಾರ್ಷಿಕ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಬಿರಾರ್ಥಿ ಹೀನಾಕೌಸರ ಮೋಮಿನ, ಲಕ್ಷ್ಮೀ ವಗ್ಗರ, ಸೃಷ್ಟಿ ಸೊನ್ನದ, ಸುಷ್ಮಿತಾ ಮಠದ ಹಾಗೂ ಕಾವೇರಿ ಕಳಸಪ್ಪಗೋಳ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಪ್ರೊ. ಎ.ಎನ್. ಬಾಗೇವಾಡಿ, ಪ್ರೊ. ಎಸ್.ಬಿ. ಕಬ್ಬಣದ ಮಾತನಾಡಿದರು. ಎನ್‌ಎಸ್‌ಎಸ್ ಶಿಬಿರಾಧಿಕಾರಿ ಪ್ರೊ.ಎಸ್.ಕೆ. ಸಾರವಾಡ ವರದಿ ವಾಚಿಸಿದರು.
ಉಮಾ ಹಿರೇಮಠ, ದೀಪಾ ಮಳಲಿ ಇದ್ದರು. ಡಾ.ಪಿ.ವಿ. ಮನಗೂಳಿ ಸ್ವಾಗತಿಸಿದರು. ಎನ್.ಎನ್. ಬಾರಕೇರ ನಿರೂಪಿಸಿದರು. ಪ್ರೊ. ಎಸ್.ಕೆ. ಸಾರವಾಡ ವಂದಿಸಿದರು.