

ಮುದಗಲ್: ಸ್ವಾಮಿ ವಿವೇಕಾನಂದರು ಆದರ್ಶ ಜೀವನ ನಡೆಸಿ ವಿಶ್ವಕ್ಕೆ ಮಾದರಿಯಾದರು. ವಿದ್ಯಾರ್ಥಿಗಳು ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಲಿಂಗಸುಗೂರು ಬಿಇಒ ಹುಂಬಣ್ಣ ರಾಠೋಡ ಹೇಳಿದರು.
ಪಟ್ಟಣ ಸಮೀಪದ ಪಿಎಂಶ್ರೀ ಜವಾಹರ ನವೋದಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು. ಶಿಸ್ತು, ಶಿಕ್ಷಣದ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದವರಲ್ಲಿ ವಿವೇಕಾನಂದರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಇಂತಹ ದೇಶಪ್ರೇಮ ಹೊಂದಿದ ಮಹನೀಯರ ಪರಿಚಯಿಸಿದಾಗ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗಲಿದೆ ಎಂದರು.
ಇದೇ ವೇಳೆ ಹರಿಯಾಣದ ಪಾಣೀಪತ್‌ಗೆ ಮೈಗ್ರೇಷನ್ ವ್ಯಾಸಂಗಕ್ಕೆ ತೆರಳುವ 9ನೇ ತರಗತಿಯ 22 ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಚೀಟಿ ಎತ್ತುವ ಮೂಲಕ ನಡೆಸಲಾಯಿತು.