

ಹೊರ್ತಿ: ಭಾರತದ ಪ್ರತಿಯೊಬ್ಬರೂ ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯ ರಾವೇಂದ್ರ ಕಾಪಸೆ ಹೇಳಿದರು.
ಅರ್ಜನಾಳದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಸಮಿತಿ, ಶಾಲಾ ಶಿಣ ಇಲಾಖೆ, ಬಿಇಒ ಕಚೇರಿಗಳ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಣ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯ ಐಕ್ಯತೆ ನಮ್ಮ ಗುರಿಯಾಗಬೇಕು.
ಭಾರತ ಸೇವಾದಳವು ಮಕ್ಕಳಿಗೆ ಶಿಸ್ತು , ಭಾವೈಕ್ಯತೆ, ಸೇವಾ ಮನೋಭಾವನೆ, ನಾಯಕತ್ವ, ರಾಷ್ಟ್ರ ಪ್ರೇಮವನ್ನು ಬೆಳಸುತ್ತಿದೆ ಎಂದರು.
ಕಾಂಗ್ರೆಸ್ ಯುವ ಮುಖಂಡ ಶಬ್ಬೀರ್ ಮುಲ್ಲಾ, ಪ್ರೌಢಶಾಲೆ ಎಸ್.ಡಿ.ಎಮ್.ಸಿ ಅಧ್ಯ ಶರಣು ಬೂದಿಹಾಳ, ಭಾರತ ಸೇವಾದಳ ವಲಯ ಸಂಟಕ ನಾಗೇಶ ಡೋಣೂರ, ಜಿಲ್ಲಾ ಸಮಿತಿ ಸದಸ್ಯ ಎಂ.ಟಿ. ಪೂಜಾರಿ ಉಪಸ್ಥಿತರಿದ್ದರು.