ಅಂಬೇಡ್ಕರ್ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ : ಡಾ.ಯತೀಂದ್ರ ಸಿದ್ದರಾಮಯ್ಯ

varuna
Published on

ಮೈಸೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ವರುಣ ಗ್ರಾಮದಲ್ಲಿ ಶುಕ್ರವಾರ ಮನಿಯಮ್ಮ ದೇವಸ್ಥಾನದ ನೂತನ ಕಟ್ಟಡ ಹಾಗೂ ಪರಿವರ್ತನ ಸ್ವಯಂ ಸೇವಾ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನ ಸರ್ವಕಾಲಕ್ಕೂ ಶ್ರೇಷ್ಠ. ಕೇವಲ ಅವರ ಹೆಸರಿನಲ್ಲಿ ಸಂಘ ಮಾಡಿದರೆ ಸಾಲದು, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ಸಂಘಕ್ಕೆ ಗೌರವ ಬರುತ್ತದೆ ಎಂದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ವರುಣ ಗ್ರಾಮದಲ್ಲಿ ಪರಿವರ್ತನ ಸ್ವಯಂ ಸೇವಾ ಸಂಘ ಉದ್ಘಾಟನೆ ಆಗುತ್ತಿರುವುದು ಸಂಸತದ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಸಬ್ ಇನ್ಸ್‌ಪೆಕ್ಟರ್ ಚೇತನ್, ವರುಣ ಗ್ರಾಮ ಪಂಚಾಯಿತಿ ಸಿದ್ದಯ್ಯ, ಪಿಡಿಒ ಕುಮಾರ ಆರಾಧ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್, ದಸಂಸ (ಅಂಬೇಡ್ಕರ್ ವಾದ) ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಪ್ರಧಾನ ಸಂಚಾಲಕ ಅಶೋಕ ಧಮ್ಮ, ಪ್ರಮುಖರಾದ ವರುಣ ಮಹೇಶ್, ಮಣಿಯಯ್ಯ, ರವಿ, ರಾಯಣಹುಂಡಿ ರವಿ, ನಾಗೇಂದ್ರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net