ಕಾಡಾನೆ ದಾಳಿಗೆ ಮರ, ವಿದ್ಯುತ್ ಕಂಬ ಧ್ವಂಸ

Kaadane
ಕಾಡಾನೆ ವಿದ್ಯುತ್ ಕಂಬವನ್ನು ಮುರಿದು ಹಾಕಿರುವುದು.
Published on

ಕಡಬ: ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಬಾಂತಾಜೆ ಸಂಪರ್ಕ ರಸ್ತೆ ಸಮೀಪ ಕಾಡಾನೆಯೊಂದು ಬೃಹತ್ ಮರವನ್ನು ರಸ್ತೆಗೆ ಉರುಳಿಸಿ ಮೂರು ವಿದ್ಯುತ್ ಕಂಬಗಳನ್ನು ಧ್ವಂಸಗೈದಿದೆ.

ಅರಣ್ಯ ಪ್ರದೇಶದಲ್ಲಿದ್ದ ಈಚಲು ಮರವನ್ನು ಕಾಡಾನೆ ಉರುಳಿಸಿ ಪುಡಿಗೈದಿದೆ. ಮರವನ್ನು ಬೀಳಿಸುವ ವೇಳೆ ಮರ ವಿದ್ಯುತ್ ಲೈನ್‌ಗೆ ಬಿದ್ದ ಪರಿಣಾಮ ಮೂರು ಕಂಬಗಳು ಹಾನಿಗೊಂಡಿದೆ. ಒಂದು ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರೆ, ಒಂದು ಮುರಿದು ಬಿದ್ದಿದೆ, ಇನ್ನೊಂದು ಬುಡದಿಂದಲೇ ಉರುಳಿದೆ. ಮೆಸ್ಕಾಂನವರು ದುರಸ್ತಿ ಕಾರ್ಯ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net