

ವಿಜಯಪುರ: ನಿರಂತರ ಓದು, ಸ್ಮರಣೆ, ಬರವಣಿಗೆ ಎಂಬ ಮೂರು ಅಂಶಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಯು ಪರೀೆ ಎಂಬ ಯುದ್ಧವನ್ನು ಸುಲಭವಾಗಿ ಜಯಿಸಿ ವಿಜಯಶಾಲಿಯಾಗುತ್ತಾನೆ ಎಂದು ಶಿಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಪರೀಾ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿದ ವಿಷಯಗಳ ಕುರಿತು ನೆನಪಿನಲ್ಲಿರಿಸಿ ಪುನರಾರ್ವತನೆ ಮಾಡುವುದು ಅವಶ್ಯಕ ಎಂದು ಸಲಹೆ ನೀಡಿದರು.
ಪರೀೆ ಬರೆಯಲು ಬೇಕಿರುವುದು ಜಾಣ ತಯಾರಿ. ಓದಿದ ವಿಷಯವನ್ನು ನಿಮ್ಮದೇ ಪದಗಳಲ್ಲಿ ಬರೆದಿಟ್ಟು, ಕಲಿತಿದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದರಿಂದ ಾಪಕಶಕ್ತಿ ವೃದ್ಧಿಸಲಿದೆ. ಒಂದು ಚಿತ್ರವು ಸಾವಿರ ಶಬ್ದಗಳಿಗೆ ಸಮ. ಕಲಿತ ವಿಷಯಗಳನ್ನು ಚಿತ್ರ, ನೆಗಳ ಮೂಲಕ ನೆನಪಿಟ್ಟುಕೊಂಡರೆ ಅಂಕ ಗಳಿಸಲು ಸಹಾಯವಾಗಲಿದೆ ಎಂದರು.
ಮುಖ್ಯ ಶಿಕ ಸುರೇಶಗೌಡ ಬಿರಾದಾರ ಮಾತನಾಡಿ, ಪರೀೆ ಎದುರಿಸುವ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಸಮರ್ಪಕವಾಗಿ ಮೂಡಿಸುವ ಮೂಲಕ ಪರೀೆಯ ಬಗೆಗಿನ ಗೊಂದಲ, ಭಯ ಇಲ್ಲದೇ ಪರೀೆಗಳನ್ನು ಬರೆಯುವ ಉತ್ತಮ ಪರಿಸರ ನಿರ್ಮಾಣಮಾಡಬೇಕು ಎಂದು ತಿಳಿಸಿದರು.
ಅಧ್ಯತೆ ವಹಿಸಿದ್ದ ಸಂಸ್ಥೆ ಅಧ್ಯ ಶಂಕರ ಹುಣಶ್ಯಾಳ ಮಾತನಾಡಿದರು. ವಿದ್ಯಾರ್ಥಿಗಳು ವಿವಿಧ ಆತಂಕ, ಆಕಾಂೆ, ಗೊಂದಲಗಳ ಕುರಿತು ಸಂವಾದ ನಡೆಸಿ ಪರಿಹಾರ ಕಂಡುಕೊಂಡರು.
ಸಂಸ್ಥೆ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕರಾದ ಎಂ.ಎಸ್. ಪಾಪನಾಳಮಠ, ರಾು ಮೊಗಳ, ನವೀನ ಬಂಡೆನ್ನವರ, ಸಚಿನ ಅವಟಿ, ಜಯಶ್ರೀ ಬಂಗಾರಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ರೇಣುಕಾ ಭಜಂತ್ರಿ, ಎಂ.ಎಸ್. ಬಾಗಲಕೋಟೆ, ಎಂ.ವಿ. ಭಜಂತ್ರಿ ಮತ್ತಿತರರಿದ್ದರು.