ನಿಡಘಟ್ಟದ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು

MDR Elephant
Published on

ಮದ್ದೂರು : ಕಾಡಿನಿಂದ ನಾಡಿಗೆ ಆಗಮಿಸಿದ ಎರಡು ಆನೆಗಳು ಸ್ಥಳೀಯರು ಮತ್ತು ರೈತರಲ್ಲಿ ಆತಂಕ ಮೂಡಿಸಿವೆ. ತಾಲೂಕಿನ ನಿಡಘಟ್ಟ ಗ್ರಾಮದ ಅಣ್ಣೇಗೌಡ ಎಂಬವರ ತೋಟದಲ್ಲಿ ಸೋಮವಾರ ಬೀಡು ಬಿಟ್ಟಿರುವ ಎರಡು ಗಂಡಾನೆಗಳು ತೈಲೂರು ಕೆರೆಯಲ್ಲಿ ಜಲ ಕ್ರೀಡೆ ನಡೆಸಿವೆ. ಬಳಿಕ ಅಕ್ಕ ಪಕ್ಕದ ಗ್ರಾಮಗಳ ಮೂಲಕ ನಿಡಘಟ್ಟ ಗ್ರಾಮಕ್ಕೆ ಆಗಮಿಸಿವೆ. ನೆರೆಯ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೊರಣಗೆರೆ ಕಾಡಿನಿಂದ ಆಗಮಿಸಿದ್ದಾವೆ ಎನ್ನಲಾದ 35 ವರ್ಷದ ಎರಡು ಕಾಡಾನೆಗಳು ಹುಣಸೆ ಮರದ ದೊಡ್ಡಿ, ಅಗರಲಿಂಗನ ದೊಡ್ಡಿ, ಕೆ. ಕೋಡಿಹಳ್ಳಿ, ಬೂದುಗುಪ್ಪೆ ಇನ್ನಿತರ ಗ್ರಾಮಗಳನ್ನು ಕ್ರಮಿಸಿ ಬಂದಿವೆ ಎನ್ನಲಾಗಿದೆ.

ಕಾಡಾನೆಗಳು ಸಾಗಿ ಬಂದ ಮಾರ್ಗದುದ್ದಕ್ಕೂ ರೈತರ ಜಮೀನಿನಲ್ಲಿ ಬೆಳೆದಿದ್ದ ಫಸಲು ( ಭತ್ತ, ಬಾಳೆ, ಕಬ್ಬು, ರೇಷ್ಮೆ ಇನ್ನಿತರ ಬೆಳೆ) ತಿಂದು ನಾಶ ಪಡಿಸಿವೆ. ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಆತಂಕ ತಿಳಿಸಿದ್ದು, ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net