ಅಜ್ಜಹಳ್ಳಿ ಗ್ರಾಮಕ್ಕೆ ಎಂಟ್ರಿಕೊಟ್ಟ ಗಜಪಡೆ: ಆತಂಕದಲ್ಲಿ ಸುತ್ತಮುತ್ತಲ ಗ್ರಾಮಸ್ಥರು

2
Published on

ಮಂಡ್ಯ: ಮದ್ದೂರು ತಾಲೂಕು ಅಜ್ಜಹಳ್ಳಿಗೆ ಮಂಗಳವಾರ ರಾತ್ರಿ ಆನೆಗಳ ಹಿಂಡು ಲಗ್ಗೆ ಇಟ್ಟಿವೆ. ಚನ್ನಪಟ್ಟಣ ರಾಮನಗರದಲ್ಲಿ ಪದೇ ಪದೆ ಕಾಣಿಸಿಕ್ಕೊಳ್ಳುತ್ತಿದ್ದ ಅನೆಗಳ ಈ ಹಿಂಡು ರಾತ್ರಿ ಇಲ್ಲಿಗೆ ಲಗ್ಗೆ ಇಟ್ಟಿವೆ. ಚನ್ನಪಟ್ಟಣದ ಸೊಗಾಲ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಗುಂಪಿನಲ್ಲಿ ಒಂಬತ್ತು ಆನೆಗಳು ಇದ್ದು, ಮಂಗಳವಾರ ಚನ್ನಪಟ್ಟಣದ ಅರಣ್ಯ ಇಲಾಖೆಯವರು ಅನೆಗಳನ್ನು ಕಾಡಿನತ್ತ ಕಳುಹಿಸಲು ಕಾರ್ಯಾಚರಣೆ

ನಡೆಸಿದ್ದರು. ಆದರೆ ದಿಕ್ಕು ತಪ್ಪಿದ ಆನೆಗಳು ಮದ್ದೂರು ತಾಲೂಕಿನತ್ತ ಸಂಚರಿಸಿ ಶಿಂಷಾ ನದಿ ದಾಟಿ ಅಜ್ಜಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದು ಇದೀಗ ಐದು ಆನೆಗಳು ಕಾಣಿಸಿಕೊಂಡಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಜನರು ಆನೆಗಳನ್ನು ಬೆದರಿಸುವ ಕಾರ್ಯಕ್ಕೆ ಮುಂದಾಗದೆ ಶಾಂತಿ ರೀತಿಯಲ್ಲಿ ವರ್ತಿಸಲು ಮನವಿ ಮಾಡಿರುವ ಗವಿಯಪ್ಪ ಇಂದು ರಾತ್ರಿ ಕಾರ್ಯಚರಣೆ ನಡೆಸಿ ಆನೆಗಳನ್ನು ಕಾಡಿನತ್ತ ಕಳುಹಿಸಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net