ಮಳಲಗಾಂವನಲ್ಲಿ ಕೃಷಿ ಭೂಮಿಯಲ್ಲಿ ಆನೆಗಳ ಆಟಾಟೋಪ

SIRSI ANE DALI
Published on

 ಶಿರಸಿ: ತಾಲೂಕಿನ ದಾಸನಕೊಪ್ಪ ಗ್ರಾಮ ಪಂಚಾಯಿತಿ ವಿವಿಧೆಡೆ ಹಾಗೂ ಮಳಲಗಾಂವ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಆನೆಗಳ ಹಿಂಡು ಕೃಷಿ ಪ್ರದೇಶದ ಮೇಲೆ ದಾಳಿ ನಡೆಸಿದೆ.

ಇಲ್ಲಿಯ ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ ನಾಯ್ಕ ಅವರಿಗೆ ಸೇರಿದ ಭತ್ತದ ಗದ್ದೆಗಳ ಮೂಲಕ ಆಗಮಿಸಿದ ಆನೆಗಳು ಅಲ್ಲಿ ತುಳಿದು ಬೆಳೆ ಹಾನಿ ಮಾಡಿವೆ. ಬಳಿಕ ಬಾಳೆ ಮತ್ತು ಅಡಕೆ ತೋಟಕ್ಕೆ ನುಗ್ಗಿ, ಬಾಳೆ ಮರಗಳನ್ನು ಮುರಿದು ತಿಂದಿವೆ.

ಮಳೆಯಿಂದಾಗಿ ಈಗಾಗಲೇ ಇಲ್ಲಿಯ ರೈತರು ಸಮಸ್ಯೆ ಎದುರಿಸಿದ್ದಾರೆ. ಅಂಥದ್ದರಲ್ಲಿ ಆನೆಗಳು ಮತ್ತೆ ಮತ್ತೆ ದಾಳಿ ಮಾಡಿ ಬೆಳೆ ಹಾನಿ ಮಾಡುತ್ತಿವೆ. ಇನ್ನೂ ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆಯು ಆನೆಗಳನ್ನು ಕಾಡಿನೆಡೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net