

ಬೂದಿಕೋಟೆ: ಹೋಬಳಿಯ ಗಡಿಭಾಗದಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಗುಲ್ಲಹಳ್ಳಿ, ಕೊತ್ತೂರು, ಗ್ರಾಮಗಳ ತೋಟಗಳಿಗೆ ಬುಧವಾರ ಆನೆಗಳ ಹಿಂಡು ಲಗ್ಗೆ ಇಟ್ಟು ಟೊಮ್ಯಾಟೊ, ರಾಗಿ, ಶೇಂಗಾ ಸೇರಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.
ಗುಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೊತ್ತೂರು ಗ್ರಾಮದ ರೈತ ಮುನಿವೆಂಕಟಪ್ಪ ಎಂಬುವವರ ಶೇಂಗಾ ಮತ್ತು ರಾಗಿ ಬೆಳೆ, ಚಿಕ್ಕಣ್ಣ ಹಾಗೂ ನಾರಾಯಣಪ್ಪ ಎಂಬುವವರ ರಾಗಿ ಬೆಳೆ ಗುಲ್ಲಹಳ್ಳಿ ರೈತ ಕೊಂಡಪ್ಪ ನಾಯಕ ಅವರ ಟೊಮ್ಯಾಟೊ ಬೆಳೆ ಸೇರಿ ಹಲವು ಬೆಳೆಗಳನ್ನು ನಾಶ ವಾಡಿವೆ.
ಟೊಮ್ಯಾಟೊಗೆ ಈ ಬಾರಿ ಉತ್ತಮ ಬೆಲೆ ಇದೆ. ಆದರೆ ಆನೆಗಳು ಬೆಳೆ ನಾಶ ಮಾಡುತ್ತಿದ್ದು, ನಮ್ಮ ತೋಟಕ್ಕೆ ಇದುವರೆಗೆ ಮೂರು ಬಾರಿ ನುಗ್ಗಿವೆ. ಬೆಳೆ ಕಳೆದುಕೊಂಡ ರೈತರಿಗೆ ತ್ವರಿತವಾಗಿ ಪರಿಹಾರ ನೀಡಿ ಕಾಡಾನೆಗಳ ಹಾವಳಿಯಿಂದ ಶಾಶ್ವತ ಪರಿಹಾರ ಕಲ್ಪಿಸಬೇಕು. ಕೊಂಡಪ್ಪನಾಯಕ, ರೈತ ಹಾಗೂ ಎಪಿಎಂಸಿ ಉಪಾಧ್ಯಕ್ಷ, ಗುಲ್ಲಹಳ್ಳಿ