ಕಾಡಾನೆ ದಾಳಿಗೆ ಫಸಲು ನಾಶ

Published on

ಹನೂರು: ಪಟ್ಟಣದ ಹೊರವಲಯದಲ್ಲಿನ ಒಂಟಿ ಮಾಲಾಪುರದ ಜಮೀನಿಗೆ ಸೋಮವಾರ ರಾತ್ರಿ ಕಾಡಾನೆಯೊಂದು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿದೆ. ಕೃಷ್ಣೇಗೌಡ ಅವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ ಮುಸುಕಿನ ಜೋಳದ ಫಸಲನ್ನು ತಿಂದು ಹಾಕಿದ್ದು, ಈರುಳ್ಳಿ ಫಸಲನ್ನು ನಾಶಪಡಿಸಿದೆ. ಇದರ ಜತೆಗೆ ನೀರಾವರಿ ಪರಿಕರ ಹಾಗೂ ತಂತಿ ಬೇಲಿಯನ್ನು ಹಾನಿಗೊಳಿಸಿದೆ. ಇದರಿಂದ ನಷ್ಟ ಉಂಟಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ಜತೆಗೆ ಕಾಡು ಪ್ರಾಣಿಗಳ ಹಾವಳಿ ಕಡಿವಾಣಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ರೈತ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net