ಹಗಲಿನಲ್ಲೇ ನಿರ್ಭೀತಿಯಿಂದ ಸಂಚರಿಸಿದ ಕಾಡಾನೆ

28.npk -1
Published on

 ನಾಪೋಕ್ಲು: ಇಲ್ಲಿಗೆ ಸಮೀಪದ ಮರದೋಡ ಗ್ರಾಮದ ಕಾಫಿ ತೋಟದಲ್ಲಿ ಹಗಲಿನಲ್ಲಿ ನಿರ್ಭೀತಿಯಿಂದ ಸಂಚರಿಸಿದ ಕಾಡಾನೆಯ ಚಲನವಲನ ದೃಶ್ಯ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕುಂಜಿಲ, ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಗ್ರಾಮದ ನೀಡುಮಂಡ ಹರೀಶ್ ಎಂಬವರಿಗೆ ಸೇರಿದ ಕೆರೆ ತಟ್ಟು ಎಂಬಲ್ಲಿಯ ಕಾಫಿ ತೋಟದಲ್ಲಿ ಗುರುವಾರ ಕಾಡಾನೆ ಸಂಚರಿಸಿದೆ. ಜತೆಗೆ ಕಾಫಿ ಗಿಡಗಳು ಕಾಡಾನೆ ನಾಶ ಮಾಡಿದೆ.

ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ಕಾಫಿ, ಅಡಿಕೆ, ಬಾಲೆ, ತೆಂಗು ಸೇರಿದಂತೆ ಮತ್ತಿತರ ಗಿಡಗಳನ್ನು ತಿಂದು ತುಳಿದು ಧ್ವಂಸ ಗೊಳಿಸುತ್ತಿವೆ. ಇದೀಗ ಕಾಫಿ ಫಸಲು ಕೊಯ್ಲಿನ ಸಮಯವಾಗಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು ಬೆಳಗಾರರಿಗೆ ಸಮಸ್ಯೆ ಉಂಟಾಗಿದೆ. ಕೂಡಲೇ ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net