

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ರಸ್ತೆಯಲ್ಲೇ ನಿಂತ ಗಜರಾಜ ಇತ್ತ ಹೋಗಲೂ ಬಿಡದೇ, ತಾನೂ ತೆರಳದೇ ಪ್ರಯಾಣಿಕರನ್ನು ಗಾಬರಿಗೊಳಿಸಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಹನೂರು ತಾಲೂಕಿನ ಕೊಣನಕೆರೆ ಕ್ರಾಸ್ ಬಳಿ ಕಾಡಾನೆ ಪ್ರತ್ಯಕ್ಷವಾಗಿದ್ದು, ದೇವಾಲಯಕ್ಕೆ ಹೊರಟಿದ್ದ ಭಕ್ತರು ಹಾಗೂ ಪ್ರಯಾಣಿಕರಿಗೆ ಜಾಗ ಬಿಡದೇ ಕೆಲವು ಸಮಯ ಅಲ್ಲೇ ನಿಂತಿತ್ತು.
ಈ ರಸ್ತೆ ಮೇಲೆ ಓಡಾಡುವ ಭಕ್ತರು ಹಾಗೂ ಗ್ರಾಮಸ್ಥರು, ತಮ್ಮ ಮೊಬೈಲ್ನಲ್ಲಿ ಆನೆಯ ದೃಶ್ಯ ಸೆರೆ ಹಿಡಿದಿದ್ದಾರೆ. ಸುಮಾರು ಒಂದು ಒಂದು ತಾಸಿನವರೆಗೂ ಯಾರಿಗೂ ಜಾಗ ಬಿಡದೇ ರಸ್ತೆಯಲ್ಲೇ ಆನೆ ನಿಂತಿತ್ತು. ಇದರಿಂದ ಕೆಲಕಾಲ ಸಂಚಾರವನ್ನೇ ನಿಲ್ಲಿಸಬೇಕಾಯಿತು.
ಅದೃಷ್ಟವಶಾತ್ ಯಾರಿಗೂ ಹಾನಿ ಮಾಡದ ಆನೆ ಅಲ್ಲಿಂದ ಕಾಲ್ಕಿತ್ತ ಬಳಿಕ ಸಂಚಾರ ಆರಂಭಿಸಲಾಯಿತು. ಇನ್ನು ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಆಗ್ಗಾಗ್ಗೇ ಕಾಡಾನೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ. (ದಿಗ್ವಿಜಯ ನ್ಯೂಸ್)