ಕಾಫಿ ತೋಟದಲ್ಲಿ ಆನೆಗಳು ಪ್ರತ್ಯಕ್ಷ

6blrp1
Published on

ಹಾಸನ : ಬೇಲೂರು ತಾಲೂಕಿನ ಮಾಲಳ್ಳಿ ಬಳಿ ಕಾಫಿ ತೋಟದಲ್ಲಿ ಕರಡಿ ಎಂಬ ಆನೆಯೊಂದಿಗೆ ಮತ್ತೆರಡು ಆನೆಗಳು ಕಾಣಿಸಿಕೊಂಡು, ಕಾಫಿ ಕಾರ್ಮಿಕರಲ್ಲಿ ಆತಂಕ ಉಂಟು ಮಾಡಿತ್ತು.


ಕೂಲಿ ಕಾರ್ಮಿಕರು, ಎಸ್ಟೇಟ್ ಸಿಬ್ಬಂದಿ ಹಾಗೂ ರೈಟರ್ ಶುಕ್ರವಾರ ಕಾಫಿ ತೋಟಕ್ಕೆ ತೆರಳುತ್ತಿದ್ದರು. ಈ ವೇಳೆ ಕರಡಿ ಎಂಬ ಆನೆ ಸೇರಿದಂತೆ ವಿಕ್ರಾಂತ್ ಹಾಗೂ ಒಂದು ಹೆಣ್ಣು ಆನೆ ಕಾಣಿಸಿಕೊಂಡಿದೆ. ಆತಂಕಗೊಂಡ ಕಾರ್ಮಿಕರು ಸ್ಥಳದಿಂದ ಓಡಿ ಹೋಗಿದ್ದಾರೆ.


ಕಾಡಾನೆ ಸಂಚಾರ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಕಾಫಿ ತೋಟದ ಮಾಲೀಕರು ಮತ್ತು ಕೂಲಿ ಕಾರ್ಮಿಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಾಫಿ ತೋಟದಲ್ಲಿ ಯಾರು ಕೆಲಸ ಮಾಡದಂತೆ ಸೂಚನೆ ನೀಡಲಾಯಿತು. ಕಾಫಿ ಎಸ್ಟೇಟ್‌ನಲ್ಲೇ ಓಡಾಡುತ್ತಿದ್ದ ಈ ಆನೆಗಳ ಚಲನ, ವಲನವನ್ನು ಸಂಜೆ ವರೆಗೂ ಗಮನಿಸಿ, ಅವುಗಳು ಬೇರೆಡೆಗೆ ಹೋದ ನಂತರ ಕಾರ್ಮಿಕರು ನಿಟ್ಟುಸಿರು ಬಿಟ್ಟಿರು. ಆದರೆ ಕಾಡಾನೆಗಳು ತೋಟದೊಳಗೆ ಓಡಾಡಿದ್ದರಿಂದ ಸಾಕಷ್ಟು ಕಾಫಿ ಗಿಡಗಳು ನಾಶವಾಗಿದ್ದು, ಆನೆಗಳನ್ನು ಹಿಡಿದು ಬೇರಡೆಗೆ ವರ್ಗಾಹಿಸುವಂತೆ ಆಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net