ಹಾಲಂದೂರು ಗ್ರಾಮದಲ್ಲಿ ಆನೆ ಸಂಚಾರ

sri- elep
ಹಾಲಂದೂರು ಸಮೀಪ ಕಂಡುಬಂದ ಕಾಡಾನೆ ಹೆಜ್ಜೆಗುರುತು.
Published on

ಶೃಂಗೇರಿ: ಹಾಲಂದೂರು ಗ್ರಾಮದ ಕೂಡ್ಲಮಕ್ಕಿ, ವಿನಾಯಕಮಕ್ಕಿಯಲ್ಲಿ ಸೋಮವಾರ ರಾತ್ರಿ ಕಾಡಾನೆ ಕಾಣಿಸಿಕೊಂಡಿದೆ.

ಮಂಗಳವಾರ ಶೆಟ್ಟಿಹಳ್ಳಿ ಕೃಷಿಕ ಅನುಪ್ ಅವರ ತೋಟದಲ್ಲಿ ಸಂಚರಿಸಿ ಮಸಿಗೆ ಗ್ರಾಮದ ಬಳಿ ಸುತ್ತಾಡುತ್ತಿದೆ. ಆನೆ ಸಂಚಾರ ಸುದ್ದಿ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಆನೆ ಸಂಚರಿಸಿರುವುದನ್ನು ಅರಣ್ಯ ಸಿಬ್ಬಂದಿ ಸ್ಪಷ್ಟ ಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಲಂದೂರು ಹಾಗೂ ಮಸಿಗೆ ಗ್ರಾಮಗಳಿಗೆ ತೆರಳಿ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net