ಹಾನಗಲ್‌ನಲ್ಲಿ ಆನೆ ಹಾವಳಿ

Elephant menace in Hanagal
Published on

ಮಡಿಕೇರಿ:

ಸೋಮವಾರಪೇಟೆ ಸಮೀಪದ ಹಾನಗಲ್‌ನಲ್ಲಿ ಕಳೆದ ೨ ದಿನಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ವ್ಯಾಪ್ತಿಯಲ್ಲಿ ಕಾಫಿ ತೋಟಗಳಿಗೆ ದಾಳಿ ಇಡುತ್ತಿರುವ ಆನೆಗಳು ಕಾಫಿ ಗಿಡಗಳನ್ನು ಧ್ವಂಸ ಮಾಡಿರುವುದಲ್ಲದೆ, ಬಾಳೆ, ಅಡಿಕೆ, ತೆಂಗು ಮತ್ತಿತರ ಬೆಳೆಗಳನ್ನು ನಾಶ ಮಾಡಿವೆ. ಆಂಜನೇಯ ದೇವಾಲಯ ಅರ್ಚಕರ ತೋಟ, ಹೆಚ್.ಎಂ. ಬಸಪ್ಪ ಅವರ ತೋಟ ಹಾಗೂ ಸಾಗರ್ ಅವರಿಗೆ ಸೇರಿದ ತೋಟಗಳಲ್ಲಿ ಆನೆಗಳು ಹಾವಳಿ ಮಾಡಿವೆ. ೭ ಆನೆಗಳಿರುವ ಗುಂಪು ಈ ಭಾಗದ ಕಾಫಿ ತೋಟಗಳಲ್ಲಿ ಸಾಕಷ್ಟು ಹಾನಿ ಮಾಡಿದ್ದು, ಅರಣ್ಯ ಇಲಾಖೆಯಿಂದ ಆನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಮತ್ತೆ ತೋಟಕ್ಕೆ ಬಂದು ಹಾನಿ ಮಾಡುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net