

ಆನೇಕಲ್: ಬನ್ನೇರುಟ್ಟ ಜೈವಿಕ ಉದ್ಯಾನವನವು ಅಂಚೆ ಇಲಾಖೆ, ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ, ರೋಟರಾಕ್ಟ್ ಜಿಲ್ಲೆ 3,191, ರೋಟರಾಕ್ಟ್ ಆಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರಿನ ಜಯನಗರದ ರೋಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಗುರುವಾರ ವಿಶ್ವ ಆನೆಗಳ ದಿನ ಆಚರಿಸಲಾಯಿತು. ಮಾವುತರು, ಕಾವಡಿಗಳು ಮತ್ತು ರಾತ್ರಿ ವೀಕ್ಷಕರು ನಿರ್ವಹಿಸುವ ನಿರ್ಣಾಯಕ ಪಾತ್ರಗಳನ್ನು ಪರಿಚಯಿಸಿ ಆನೆ ಮತ್ತು ಮಾವುತನ ನಡುವಿನ ಬಾಂಧವ್ಯದ ಬಗ್ಗೆ ಪಶುವೈದ್ಯರು ಮಾಹಿತಿ ನೀಡಿದರು.
ಜಪಾನ್ಗೆ ಪ್ರಾಣಿವಿನಿಮಯದಡಿ ಇತ್ತೀಚಿಗೆ ಆನೆಗಳ ಯಶಸ್ವಿ ಸ್ಥಳಾಂತರದ ಅನುಭವಗಳನ್ನು ಜೀವಶಾಸೆ ಹಂಚಿಕೊಂಡರು. ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್, ಐಪಿಒಎಸ್ ಕೆ.ಪ್ರಕಾಶ್, ಬನ್ನೇರುಟ್ಟ ಜೈವಿಕ ಉದ್ಯಾನವನ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯ ಸೇನ್, ಐಎಫ್ಎಸ್ ಅವರು ಶೈಕ್ಷಣಿಕ, ಆನೆಯ ವಿಶೇಷ ಪೋಸ್ಟ್ಕಾರ್ಡ್ ಬಿಡುಗಡೆ ಮಾಡಿದರು. ನಿವೃತ್ತ ಮಾವುತರಾದ ಮೋಟಾ ಮತ್ತು ಭಾಸ್ಕರ್ ಅವರನ್ನು ಗೌರವಿಸಲಾಯಿತು. ರೋಟರಾಕ್ಟ್ ಕ್ಲಬ್ ಸದಸ್ಯರು ರಾತ್ರಿ ಆನೆ ಕಾವಲುಗಾರರಿಗೆ ಸೌರಶಕ್ತಿ ಚಾಲಿತ ದೀಪಗಳನ್ನು ವಿತರಿಸಿದರು.