ತೋಟಗಳಿಗೆ ನುಗ್ಗಿದ ಆನೆ ಗುಂಪು

aane
Published on

ಸುಳ್ಯ: ಕನಕಮಜಲು ಗ್ರಾಮದ ಕುದ್ಕುಳಿ ಹಾಗೂ ಕೊರಂಬಡ್ಕ ಪರಿಸರದಲ್ಲಿ ಕೃಷಿ ತೋಟಗಳಿಗೆ ಆನೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆ ನಾಶಗೊಂಡ ಘಟನೆ ಸಂಭವಿಸಿದೆ.

ಲೋಹಿತ್ ಕುಮಾರ್ ಕುದ್ಕುಳಿ ಅವರ ಕೃಷಿ ತೋಟದಲ್ಲಿ ಎಂಟುತೆಂಗಿನ ಗಿಡ, ಒಂದು ದೊಡ್ಡ ತೆಂಗಿನ ಮರ, ಇಪ್ಪತ್ತೈದಕ್ಕೂ ಅಧಿಕ ಬಾಳೆ, ಐದಾರು ಅಡಕೆ ಸಸಿಗಳಿಗೆ ಹಾನಿಯಾಗಿದೆ. ಕೊರಂಬಡ್ಕ ಪದ್ಮನಾಭ ಗೌಡರ ತೋಟಕ್ಕೂ ದಾಳಿ ನಡೆಸಿದ್ದು, ಕೃಷಿ ಬೆಳೆಗಳನ್ನು ನಾಶಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net