ಕಾಡಾನೆ ದಾಳಿ, ಕೃಷಿ ನಾಶ

Aane
Published on

ಸುಳ್ಯ: ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು ಗುರುವಾರ ತಡರಾತ್ರಿಯೂ ಕುಡೆಂಬಿ ಹಾಗೂ ಸುತ್ತಮುತ್ತಲಿನ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡಿವೆ.

ಕುಡೆಂಬಿ ಬಳಿಯ ಕಾರ್ತಿಕ್ ಕೊಯಿಂಗಾಜೆ, ಮುದ್ದಪ್ಪ ಗೌಡ ಕರ್ಲಪ್ಪಾಡಿ, ಚಿನ್ನಪ್ಪ ಗೌಡ ಕರ್ಲಪ್ಪಾಡಿ ಎಂಬವರ ಕೃಷಿ ತೋಟಕ್ಕೆ ದಾಳಿ ಮಾಡಿದ ಕಾಡಾನೆಗಳು ತೆಂಗು, ಅಡಕೆ, ಬಾಳೆ ಕೃಷಿಯನ್ನು ನಾಶ ಮಾಡಿವೆ.

ಕಳೆದ ಕೆಲವು ದಿನಗಳಿಂದ ತುದಿಯಡ್ಕ, ಬಾಳೆಹಿತ್ಲು, ಆನೆಕಲ್ಲು ಮತ್ತಿತರ ಕಡೆಗಳಲ್ಲಿ ಕೃಷಿ ನಾಶ ಮಾಡಿತ್ತು. ರಾತ್ರಿಯಾಗುತ್ತಿದ್ದಂತೆ ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುತ್ತಿವೆ. ಸ್ಥಳೀಯರು ಶಬ್ಧ ಕೇಳಿ ಎಚ್ಚ್ಚೆತ್ತು ಆನೆ ಓಡಿಸಲು ಹರಸಾಹಸ ಪಟ್ಟರೆ ಸಮೀಪದ ಕಾಡಿಗೆ ತೆರಳುವ ಆನೆಗಳು ಮತ್ತೆ ಮರಳಿ ಬಂದು ಕೃಷಿ ನಾಶ ಪಡಿಸುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net