ಮಿತ್ತಬಾಗಿಲಿನಲ್ಲಿ ಕಾಡಾನೆ ಉಪಟಳ

elephant
ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವುದು
Published on

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಕೃಷಿಭೂಮಿಗೆ ದಾಳಿ ನಡೆಸಿ ಕೃಷಿಗೆ ಹಾನಿ ಎಸಗಿದೆ.

ಮಿತ್ತಬಾಗಿಲು ಗ್ರಾಮದ ಬಾನೊಟ್ಟು ಯೋಗೀಶ್ ಎಂಬುವರ ಸೋಲಾರ್ ಬೇಲಿಯನ್ನು ಮುರಿದು ಹಾಕಿರುವ ಕಾಡಾನೆಗಳು ಕೋಡಿ ಶೀನಪ್ಪ ಗೌಡ ಎಂಬುವರ ತೋಟದ ಬಾಳೆಗಿಡ ಮತ್ತು ಗದ್ದೆಗಳಿಗೆ ದಾಳಿ ನಡೆಸಿ ಹಾನಿಗೈದಿವೆ. ಹಿಂಡಿನಲ್ಲಿ ಎರಡಕ್ಕಿಂತ ಅಧಿಕ ಕಾಡಾನೆಗಳಿರುವ ಶಂಕೆ ವ್ಯಕ್ತವಾಗಿದೆ. ಸೋಮವಾರ ರಾತ್ರಿ ಸಮೀಪದ ಮಲವಂತಿಗೆ ಗ್ರಾಮದಲ್ಲಿ 6ಕ್ಕಿಂತ ಅಧಿಕ ಕಾಡಾನೆಗಳು ತೋಟಗಳಿಗೆ ನುಗ್ಗಿ ಹಾನಿ ಮಾಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net