ಆನೆ ದಾಳಿಗೆ ವ್ಯಕ್ತಿ ಸಾವು

elephant
Published on

ಚಾಮರಾಜನಗರ: ಹೊತ್ತು ಮುಳುಗಿದರೂ ಮನೆಗೆ ಮರಳದ ಹಸು ಹುಡುಕಿಕೊಂಡು ಕಾಡಿಗೆ ಹೋದ ರೈತನೊಬ್ಬ ಆನೆ ದಾಳಿಗೆ ಬಲಿಯಾಗಿದ್ದಾನೆ. ಬಿಆರ್ ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕೆ.ಗುಡಿ ವಲಯದ‌ ಹೊಂಗಲವಾಡಿ ಗ್ರಾಮದ ಗುರುಸ್ವಾಮಿ(55) ಮೃತ‌ ದುರ್ದೈವಿ.

ರೈತ ಸಾಕಿದ್ದ ಹಸು ಗ್ರಾಮದ ಬಳಿಯ ಅರಣ್ಯ ಪ್ರದೇಶದತ್ತ ಬುಧವಾರ ಮೇಯಲು ಹೋಗಿ ಮನೆಗೆ ಮರಳಿರಲಿಲ್ಲ.‌ ಹಸು ಹುಡುಕಿ‌ ಹೊರಟ ರೈತ ಗುರುಸ್ವಾಮಿ ಆನೆ ದಾಳಿಗೆ ತುತ್ತಾಗಿದ್ದಾನೆ.

ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಸ್ಥಳಕ್ಕೆ ಕೆ.ಗುಡಿ ವಲಯ ಅರಣ್ಯಾಧಿಕಾರಿ ಶಾಂತಪ್ಪ ಪೂಜಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net