ಕೃಷಿಭೂಮಿಗೆ ಕಾಡಾನೆ ದಾಳಿ

Kadaane
Published on

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಹಾಗೂ ಕಡ್ಯ ಕೊಣಾಜೆ ಗ್ರಾಮದ ಪುತ್ತಿಗೆಯಲ್ಲಿ ಕೃಷಿ ತೋಟಕ್ಕೆ ಕಾಡಾನೆ ನುಗ್ಗಿ ಹಾನಿಗೈದಿದೆ.

ನೂಜಿಬಾಳ್ತಿಲ ಗ್ರಾಮದ ನಿಡ್ಡೋ ಪದ್ಮನಾಭ, ಸಂತೋಷ್, ಚಂದ್ರಪ್ರಸಾದ್ ಅವರ ತೋಟದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಅಡಿಕೆ, ಬಾಳೆ ಕೃಷಿಗೆ ಹಾನಿ ಮಾಡಿದೆ. ಕೊಣಾಜೆ ಗ್ರಾಮದ ಪುತ್ತಿಗೆ ಓಡಿಯ್ಯ ಸುನಿಲ್ ಜೋಸೆಫ್ ಅವರ ತೋಟದಲ್ಲೂ ಅಡಕೆ, ಬಾಳೆ ಕೃಷಿಗೆ ಕಾಡಾನೆ ಹಾನಿ ಮಾಡಿದೆ. ಪುತ್ತಿಗೆಯಲ್ಲಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net