ಗುಂಡಾಪುರದಲ್ಲಿ ಕಾಡಾನೆಗಳ ದಾಳಿಗೆ ಅಪಾರ ಬೆಳೆ ಹಾನಿ

23hgr1
Published on

ಮಂಡ್ಯ: ಮಳವಳ್ಳಿ ತಾಲೂಕು ಹಲಗೂರು ಸಮೀಪದ ಗುಂಡಾಪುರ ಗ್ರಾಮದ ಜಮೀನಿಗೆ ನುಗ್ಗಿದ ಕಾಡಾನೆಗಳ ಗುಂಪು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.

ನಿವೃತ್ತ ಶಿಕ್ಷಕ ಕಾಳೇಗೌಡ ಎಂಬುವರ ಜಮೀನಿಗೆ ಬಸವನ ಬೆಟ್ಟ ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳ ಗುಂಪು ಸೋಲಾರ್ ಬೇಲಿಯನ್ನು ಮುರಿದು ಜಮೀನಿನಲ್ಲಿದ್ದ ನೀರಿನ ಕೊಳವೆ, ಬತ್ತದ ಫಸಲು, ಬಾಳೆ ಫಸಲನ್ನು ನಾಶ ಮಾಡಿವೆ. ತೆಂಗು, ಹಲಸು, ಮಾವು, ಸಪೋಟ ಗಿಡಗಳನ್ನು ತುಳಿದು ಹಾಕಿವೆ.

ಜಮೀನಿಗೆ ನಿರಂತರವಾಗಿ ಕಾಡಾನೆಗಳು ಬಂದು ಫಸಲು ನಾಶ ಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ಕೊಡಿಸಲು ಕ್ರಮಕ್ಕೆ ಮುಂದಾಗಬೇಕು ಎಂದು ಕಾಳೇಗೌಡ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net