ಕಾರಿನ ಮೇಲೆ ಕಾಡಾನೆ ಹಿಂಡು ದಾಳಿ

ಸಿದ್ದಾರ್ಥ್ ಅವರ ಕಾರು
Published on

ಕುಶಾಲನಗರ: ಸಮೀಪದ ಆನೆಕಾಡು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಕಾರಿನ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊಂಡಿದೆ. ಬೈಲಕುಪ್ಪೆ ನಿವಾಸಿ ಸಿದ್ಧಾರ್ಥ್ ಕುಶಾಲನಗರದಿಂದ ಮಡಿಕೇರಿ ಕಡೆ ತೆರಳುತ್ತಿದ್ದರು. ಈ ಸಂದರ್ಭ ರಸ್ತೆ ದಾಟುತ್ತಿದ್ದ ಆರೇಳು ಕಾಡಾನೆಗಳ ಹಿಂಡು ಕಾರಿನ ಮೇಲೆ ದಾಳಿ ನಡೆಸಿವೆ. ಕಾರಿನಲ್ಲಿದ್ದ ಸಿದ್ಧಾರ್ಥ್ ಹಾಗೂ ಸ್ನೇಹಿತರು ಅಪಾಯದಿಂದ ಪಾರಾಗಿದ್ದಾರೆ. ಕುಶಾಲನಗರ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net