ಸಿದ್ದಲಿಂಗಪುರದಲ್ಲಿ ಕಾಡಾನೆಗಳ ಹಾವಳಿ

elephnat
Published on

ಕುಶಾಲನಗರ:

ಕುಶಾಲನಗರ ತಾಲೂಕು ಸಿದ್ದಲಿಂಗಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂಣದ ಅಪಾರ ಪ್ರಮಾಣದ ಭತ್ತದ ಬೆಳೆ ನಷ್ಟ ಆಗಿದೆ. ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಬಾಣವಾರ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬರುವ ಕಾಡಾನೆಗಳಿಂದಾಗಿ ಸಿದ್ದಲಿಂಗಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ಭತ್ತದ ಬೆಳೆ, ಅಡಿಕೆ, ತೆಂಗು ಬೆಳೆಗಳನ್ನು ತಿಂದು, ತುಳಿದು ಅಪಾರ ಪ್ರಮಾಣದಲ್ಲಿ ನಷ್ಟಪಡಿಸಿವೆ.

ಸಿದ್ದಲಿಂಗಪುರ ಗ್ರಾಮದ ಬಿ.ಕೆ. ಸತೀಶ್ ಕುಮಾರ್ ಅವರ ಜಮೀನಿಗೆ ದಾಳಿ ಮಾಡಿರುವ ಕಾಡಾನೆಗಳು ಕಟಾವು ಹಂತದ ಭತ್ತ ಬೆಳೆ, ಅಡಿಕೆ, ತೆಂಗಿನ ಮರಗಳನ್ನು ಮನಬಂದAತೆ ತಿಂದು ತುಳಿದು ನಷ್ಟಪಡಿಸಿವೆ. ಸಂಬAಧಿಸಿದ ಬಾಣಾವರ ವ್ಯಾಪ್ತಿಯ ಅರಣ್ಯ ಇಲಾಖೆಯ ಅಧಿಕಾರಿ ವರ್ಗ ಸೂಕ್ತವಾಗಿ ಸ್ಪಂದಿಸುವAತೆ ಈ ವ್ಯಾಪ್ತಿಯ ಗ್ರಾಮಸ್ಥರು ಅಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net