ಚಾರ್ಮಾಡಿಯಲ್ಲಿ ಮತ್ತೆ ಒಂಟಿಸಲಗ ಪ್ರತ್ಯಕ್ಷ

elephant
Published on

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಪರಿಸರದಲ್ಲಿ ಮತ್ತೆ ಒಂಟಿಸಲಗ ಪ್ರತ್ಯಕ್ಷವಾಗಿದೆ.

ಸೋಮವಾರ ತಡರಾತ್ರಿ ಘಾಟಿ ಭಾಗದ ಅಣ್ಣಪ್ಪ ಬೆಟ್ಟದಿಂದ ಸೋಮನ ಕಾಡು ಅರಣ್ಯಭಾಗದ ತನಕ ರಸ್ತೆಯಲ್ಲಿ ಸವಾರಿ ನಡೆಸಿದ ಕಾಡಾನೆ ಬಳಿಕ ಸೋಮನ ಕಾಡು ಪರಿಸರದ ಅರಣ್ಯ ಪ್ರದೇಶದತ್ತ ತೆರಳಿದೆ ಎಂದು ಪ್ರತ್ಯಕ್ಷದರ್ಶಿ ವಾಹನ ಸವಾರರು ತಿಳಿಸಿದ್ದಾರೆ. ಕಾಡಾನೆ ರಸ್ತೆಯಲ್ಲಿ ಓಡಾಟ ನಡೆಸಿದ ವೇಳೆ ಹಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಮಂಜಿನ ವಾತಾವರಣ, ನಿರಂತರ ಸುರಿಯುವ ಮಳೆ, ಜತೆಗೆ ಕಾಡಾನೆ ತಿರುಗಾಟ ಘಾಟಿ ಪ್ರದೇಶದಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net