ವಿದ್ಯುತ್ ತಗುಲಿ ಎರಡು ಆನೆಗಳ ಸಾವು

IMG-20251102-WA0097.jpg
Published on

ಖಾನಾಪುರ(ಬೆಳಗಾವಿ) ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಆನೆಗಳು ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅರಣ್ಯ ಭಾಗದಲ್ಲಿ ನಡೆದಿದೆ.
ತಾಲೂಕಿನ ದೇವರಾಯಿ ಬಳಿಯ ಸುಳೇಗಾಳಿ ಗ್ರಾಮದ ರೈತರ ಜಮೀನಿನ ಬಳಿ ಎರಡು ಕಾಡಾನೆಗಳು ವಿದ್ಯುತ್  ತಂತಿ ಸ್ಪರ್ಶಿಸಿ, ಸ್ಥಳದಲ್ಲಿಯೇ ಸಾವನ್ನಪ್ಪಿವೆ.
ರೈತರ ಭತ್ತದ ಗದ್ದೆಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಗಳನ್ನು ತುಳಿದಾಗ ಆನೆಗಳು ಸತ್ತು ಬಿದ್ದಿವೆ. ಸೌರಚಾಲಿತ ಈ ವಿದ್ಯುತ್ ತಂತಿಗಳಿಂದ ಅಷ್ಟೊಂದು ಪ್ರಮಾಣದ ವಿದ್ಯುತ್ ಪ್ರವಹರಿಸುವುದಿಲ್ಲ. ಆದರೆ ಈ ತಂತಿಗಳ ಮೇಲೆ ವಿದ್ಯುತ್ ಸಂಪರ್ಕ ಹಾದು ಹೋಗಿರುವ ತಂತಿಯೊಂದು ಬಿದ್ದ ಪರಿಣಾಮ ಅದರಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಹರಿಸಿ ಆನೆಗಳು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net